alex Certify ನೀವೂ ʼಮಕ್ಕಳʼ ಮೇಲೆ ಕೂಗಾಡ್ತೀರಾ……? ಹಾಗಾದ್ರೆ ಇದನ್ನೊಮ್ಮೆ ಓದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೀವೂ ʼಮಕ್ಕಳʼ ಮೇಲೆ ಕೂಗಾಡ್ತೀರಾ……? ಹಾಗಾದ್ರೆ ಇದನ್ನೊಮ್ಮೆ ಓದಿ

 

ಸಾಮಾನ್ಯವಾಗಿ 14-15 ವರ್ಷದ ಮಕ್ಕಳದ್ದು ತುಂಬಾ ತುಂಟ ಸ್ವಭಾವ. ಈ ವಯಸ್ಸಿನಲ್ಲಿ ಹುಡುಗಾಟ ಹೆಚ್ಚು. ಓದಿನ ಕಡೆಗೂ ಗಮನ ಕಡಿಮೆಯಾಗಿರುತ್ತದೆ. ಅಂತಹ ಮಕ್ಕಳ ಮೇಲೆ ತಂದೆ-ತಾಯಿ ರೇಗಾಡುವುದು ಸಹಜ.

ಪ್ರೀತಿಯಿಂದ ಹೇಳಿದರೆ ಮಕ್ಕಳಿಗೆ ಅರ್ಥವಾಗದು ಎಂದುಕೊಂಡು ಹೆತ್ತವರು ಕಿರುಚಾಡುತ್ತಾರೆ. ಆದ್ರೆ ಈ ರೀತಿ ಮಾಡುವುದರಿಂದ ಮಕ್ಕಳಲ್ಲಿರುವ ಸಂವಹನ ಶಕ್ತಿಯೇ ಕುಂಠಿತವಾಗುತ್ತದೆ ಎಂದು ಸಂಶೋಧನೆಯೊಂದು ಹೇಳಿದೆ.

ಸಮಾಧಾನವಾಗಿ ತಿಳಿಸಿ ಹೇಳಿದ್ರೆ ಮಾತ್ರ ಅದು ಮಕ್ಕಳಿಗೆ ಅರ್ಥವಾಗುತ್ತದೆ. ಜೊತೆಗೆ ಪರಿಣಾಮವೂ ಧನಾತ್ಮಕವಾಗಿರುತ್ತದೆ. ಕಾರ್ಡಿಫ್ ಯೂನಿವರ್ಸಿಟಿಯಲ್ಲಿ ಈ ಬಗ್ಗೆ ಸಂಶೋಧನೆ ಮಾಡಲಾಗಿದೆ. ಶಾಲಾ ಶಿಕ್ಷಕರ ಪ್ರೇರಕ ಭಾಷೆಯ ಬಳಕೆಯು ವಿದ್ಯಾರ್ಥಿಗಳ ಕಲಿಕೆ ಮತ್ತು ಯೋಗಕ್ಷೇಮದ ಮೇಲೆ ಪರಿಣಾಮ ಬೀರುತ್ತದೆ.

ಇದರಿಂದ ಹದಿಹರೆಯದವರು ಹೆಚ್ಚು ಕಾಳಜಿ ವಹಿಸುತ್ತಾರೆ, ಸಂತೋಷವಾಗಿರುತ್ತಾರೆ. ಕಲಿಕೆಯಲ್ಲೂ ಹೆಚ್ಚು ಆಸಕ್ತಿ ತೋರುತ್ತಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...