ಶೌಚಾಲಯ ಪ್ರತಿಯೊಬ್ಬರಿಗೂ ಅತಿ ಮುಖ್ಯ. ನಾವು ಪ್ರತಿನಿತ್ಯ ಬಳಸುವ ಶೌಚಾಲಯದ ಬಗ್ಗೆ ಹೆಚ್ಚು ಗಮನ ಹರಿಸೋದಿಲ್ಲ. ಶೌಚದ ಸಮಯದಲ್ಲಿ ಸಾಮಾನ್ಯವಾಗಿ ಕೆಲ ತಪ್ಪುಗಳನ್ನು ಮಾಡ್ತೆವೆ. ಆ ತಪ್ಪು ಅನಾರೋಗ್ಯ ಅಥವಾ ಮಾರಣಾಂತಿಕ ಖಾಯಿಲೆಗೆ ಕಾರಣವಾಗಬಹುದು.
ಶೌಚಾಲಯಕ್ಕೆ ಹೋದ ತಕ್ಷಣ ಅದ್ರ ಸ್ವಚ್ಛತೆ ಗಮನಿಸದೆ ಅದನ್ನು ಬಳಸುವುದು ದೊಡ್ಡ ತಪ್ಪು. ಶೌಚಾಲಯ ಸ್ವಚ್ಛವಾಗಿಲ್ಲವಾದ್ರೆ ಅದನ್ನು ಸ್ವಚ್ಛಗೊಳಿಸಬೇಕು. ನಂತ್ರ ಶೌಚಕ್ಕೆ ಕುಳಿತುಕೊಳ್ಳಬೇಕು.
ಹಾಗೆ ಮಲ ವಿಸರ್ಜನೆ ಮಾಡಿದ ನಂತ್ರ ಶೌಚಾಲಯಕ್ಕೆ ಸರಿಯಾಗಿ ನೀರು ಹಾಕಬೇಕು. ಕೆಲವರು ಇದನ್ನು ಮರೆಯುವುದುಂಟು.
ಕೆಲವರಿಗೆ ಶೌಚಾಲಯದಲ್ಲಿ ಸಿಗರೇಟ್ ಸೇದುವುದು, ಗೋಡೆ ಮೇಲೆ ಉಗುಳುವ ಅಭ್ಯಾಸವಿರುತ್ತದೆ ಗೋಡೆ ಮೇಲೆ ಉಗುಳಿದ್ರೆ ಶೌಚಾಲಯ ಕೊಳಕಾಗುವ ಜೊತೆಗೆ ಅನಾರೋಗ್ಯ ಕಾಡುತ್ತದೆ.
ಶೌಚಾಲಯಕ್ಕೆ ಹೋದ ನಂತರ ಕೆಲವರು ತುಂಬಾ ಸಮಯ ಶೌಚಾಲಯದಲ್ಲಿಯೇ ಕಳೆಯುತ್ತಾರೆ. ಅದ್ರಲ್ಲೂ ಇತ್ತೀಚೆಗೆ ಮೊಬೈಲ್ ತೆಗೆದುಕೊಂಡು ಹೋಗುವವರ ಸಂಖ್ಯೆ ಹೆಚ್ಚಾಗಿದೆ. ಶೌಚಾಲಯವು ಸ್ವಚ್ಚವಾಗಿದ್ರೆ ತೊಂದ್ರೆ ಇಲ್ಲ. ಆದ್ರೆ ಶುಚಿಯಾಗಿರದೇ ಇದ್ರೆ ಹೆಚ್ಚಿನ ಸಮಯ ಕಳೆಯೋದ್ರಿಂದ ಆರೋಗ್ಯ ಕೆಡುವ ಸಾಧ್ಯತೆಯಿರುತ್ತದೆ.
ಕಮೋಡ್ ನಲ್ಲಿ ನ್ಯಾಪ್ಕಿನ್ ಹಾಕುವುದು, ಕೂದಲು ಹಾಕುವುದು ಮಾಡಬಾರದು. ಶೌಚಾಲಯದಿಂದ ಬಂದ ನಂತರ ತಪ್ಪದೆ ಸೋಪಿನಿಂದ ಕೈ ತೊಳೆದುಕೊಳ್ಳಬೇಕು. ಅನೇಕ ಬಾರಿ ತರಾತುರಿಯಲ್ಲಿ ಕೈ ಸರಿಯಾಗಿ ತೊಳೆಯಲ್ಲ. ಕೈ ತೊಳೆಯದೆ ಆಹಾರ ಸೇವನೆ ಮಾಡಿದ್ರೆ ಸೋಂಕು ಹೊಟ್ಟೆ ಸೇರುತ್ತದೆ.