ತುಪ್ಪ ತಿಂದರೆ ದಪ್ಪಗಾಗುತ್ತೀರಿ ಎಂದು ಎಲ್ಲರೂ ಹೇಳಿ ನಿಮ್ಮನ್ನು ಹೆದರಿಸಿ ಇಟ್ಟಿದ್ದಾರೆಯೇ, ಸತ್ಯ ಸಂಗತಿ ಏನೆಂದು ನಿಮಗೆ ತಿಳಿದರೆ ನಿಮ್ಮ ತಪ್ಪು ಭಾವನೆ ದೂರವಾಗುತ್ತದೆ. ಹಾಗಾದರೆ ಏನದು?
ತುಪ್ಪದಲ್ಲಿ ಅದರಲ್ಲೂ ಮನೆಯಲ್ಲೇ ತಯಾರಿಸಿದ ತುಪ್ಪ ಹಲವು ಶಕ್ತಿಗಳ ಆಗರ. ಇದರಲ್ಲಿ ಹಲವು ವಿಧದ ಕ್ಯಾಲೊರಿ, ಪ್ರೊಟೀನ್ ಗಳಿವೆ. ಇದು ಹೃದಯ ಆರೋಗ್ಯವನ್ನು ಕಾಪಾಡುತ್ತದೆ.
ನಮ್ಮ ದೇಹದಲ್ಲಿ ಬೊಜ್ಜು ಬೆಳೆಯುವುದನ್ನು ತಪ್ಪಿಸುವಲ್ಲಿ ತುಪ್ಪದ ಪಾತ್ರ ಮಹತ್ವದ್ದು. ಇದು ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ. ಹಸುವಿನ ತುಪ್ಪದಲ್ಲಿ ಕೊಲೆಸ್ಟ್ರಾಲ್ ಇಲ್ಲ ಹಾಗಾಗಿ ಬೊಜ್ಜು ಬೆಳೆಯಲು ಸಾಧ್ಯವೇ ಇಲ್ಲ.
ಇದು ಎಲುಬನ್ನು ಗಟ್ಟಿಗೊಳಿಸುತ್ತದೆ. ಕಣ್ಣಿನ ಆರೋಗ್ಯವನ್ನು ಕಾಪಾಡುತ್ತದೆ. ತುಪ್ಪಕ್ಕೆ ಚಿಟಿಕೆ ಕಾಳು ಮೆಣಸಿನ ಪುಡಿ ಬೆರೆಸಿ ಮಲಗುವ ಮುನ್ನ ಸೇವಿಸುವುದರಿಂದ ದೃಷ್ಟಿ ಸಂಬಂಧಿ ಸಮಸ್ಯೆಗಳು ದೂರವಾಗುತ್ತವೆ. ಕೂದಲು ಸೊಂಪಾಗಿ ಉದ್ದವಾಗಿ ಬೆಳೆಯಲು ತುಪ್ಪ ನೆರವಾಗುತ್ತದೆ.