ಚಳಿಗಾಲದಲ್ಲಿ ಕಾಡುವ ಸಮಸ್ಯೆಗಳಲ್ಲಿ ಮೂಗು ಒಣಗುವುದು ಕೂಡಾ ಒಂದು. ಇದನ್ನು ಪರಿಹರಿಸುವ ಕೆಲವು ಮನೆಮದ್ದುಗಳು ಯಾವುವೆಂದು ನೋಡೋಣ.
ಚಳಿಗಾಲದಲ್ಲಿ ಬೆಳಗ್ಗೆ ಎದ್ದಾಕ್ಷಣ ಅಥವಾ ಹೊರಹೋಗುವ ಮುನ್ನ ಮೂಗಿನ ತುದಿಗೆ ತೆಳುವಾಗಿ ತೆಂಗಿನೆಣ್ಣೆಯನ್ನು ಸವರಿಕೊಳ್ಳಿ. ಇದರಿಂದ ತ್ವಚೆ ಒಣಗುವುದಿಲ್ಲ ಮಾತ್ರವಲ್ಲ ಮೂಗು ತೇವಾಂಶವನ್ನು ಹೊಂದಿರುತ್ತದೆ. ಕನಿಷ್ಠ ಚಳಿ ಇರುವ ಸಮಯದಲ್ಲಿ ಹೀಗೆ ಮಾಡಿಕೊಂಡರೆ ಸಾಕು.
ವ್ಯಾಸಲಿನ್, ಬಯೋಲಿನ್ ಮೊದಲಾದ ಪೆಟ್ರೋಲಿಯಂ ಜೆಲ್ಲಿಗಳೂ ಇದಕ್ಕೆ ಉತ್ತಮ ಪರಿಹಾರ ನೀಡುತ್ತವೆ. ಮಾಯಿಸ್ಚರೈಸರ್ ಕೂಡಾ ತೆಂಗಿನೆಣ್ಣೆ ನೀಡುವ ಪ್ರಯೋಜನವನ್ನೇ ಕೊಡುತ್ತದೆ. ಇದನ್ನು ಪೂರ್ಣ ಮುಖದ ಮೇಲೆ ಹಚ್ಚಿದರೆ ಸತ್ತ ಜೀವಕೋಶಗಳೂ ದೂರವಾಗುತ್ತವೆ. ಉತ್ತಮ ಫಲಿತಾಂಶ ಪಡೆಯಲು ಇದನ್ನು ದಿನಕ್ಕೆರಡು ಬಾರಿ ಹಚ್ಚಿ.
ಕೊಬ್ಬರಿ ಎಣ್ಣೆಯಂತೆ ವಿಟಮಿನ್ ಇ ಕೂಡಾ ಮೂಗಿಗೆ ಉತ್ತಮ ಪರಿಹಾರ ನೀಡುತ್ತದೆ. ಇದನ್ನು ನೇರವಾಗಿ ಮೂಗಿನ ಮೇಲೆಯೇ ಹಚ್ಚಿಕೊಳ್ಳಬಹುದು. ಮೂಗಿಗೆ ಹಾಕಿಕೊಳ್ಳುವ ತರತರದ ಸ್ಪ್ರೇ ಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು ಇವು ಕೂಡ ಮೂಗನ್ನು ತೇವಾಂಶದಿಂದ ಇರುವಂತೆ ನೋಡಿಕೊಳ್ಳುತ್ತದೆ.