ಕೆಲವರಿಗೆ ಉಗುರು ಕಚ್ಚುವ ಅಭ್ಯಾಸವಿರುತ್ತದೆ. ಇದಕ್ಕೆ ಸಾಮಾನ್ಯವಾಗಿ ಮಾನಸಿಕ ಒತ್ತಡವೆ ಕಾರಣ ಎಂದು ಎಲ್ಲರು ಹೇಳುತ್ತಾರೆ. ಆದರೆ ಈ ಅಭ್ಯಾಸದ ಬಗ್ಗೆ ಆಘಾತಕಾರಿ ವಿಷಯವೊಂದು ಸಂಶೋಧನೆಯಿಂದ ಹೊರ ಬಂದಿತ್ತು.
ಸಂಶೋಧನೆಯ ಪ್ರಕಾರ ಮೂವರಲ್ಲಿ ಒಬ್ಬರು ಉಗುರು ಕಚ್ಚುವರು ಇದ್ದಾರಂತೆ. ಉಗುರು ಕಚ್ಚುವವರಿಗೆ ತಾವು ಎಲ್ಲದರಲ್ಲಿ ಪರ್ಫೆಕ್ಟ್ ಇರಬೇಕು ಎಂಬ ಹುಚ್ಚು ಇರುತ್ತೆ ಅಂತೆ. ಆ ಕಾರಣಕ್ಕೆ ಉಗುರು ಕಡಿಯೋದನ್ನು ರೂಢಿ ಮಾಡಿಕೊಳ್ಳುತ್ತಾರಂತೆ. ಪ್ರತಿದಿನವೂ ಉಗುರು ಕಚ್ಚುವವರಿಗೆ ಈ ಅಭ್ಯಾಸ ಮಾತ್ರವಲ್ಲದೆ ಮೈಪರಚಿಕೊಳ್ಳುವುದು, ಕೂದಲು ಎಳೆದುಕೊಳ್ಳುವುದು ಹೀಗೆ ಕೆಲಸಕ್ಕೆ ಬಾರದ ವರ್ತನೆಯನ್ನು ಮಾಡುತ್ತಾರಂತೆ. ಸಂಶೋಧನೆ ಪ್ರಕಾರ ಉಗುರು ಕಚ್ಚುವುದು ಆರೋಗ್ಯಕ್ಕೆ ಕೂಡ ಮಾರಕವಾಗಿದೆಯಂತೆ.
ಈ ಚಾಳಿ ಹೆಚ್ಚಾದರೆ ಒಬಿಸಿವ್ ಕಂಪಲ್ಸಿವ್ ಡಿಸೈರ್ ಎಂಬ ಮಾನಸಿಕ ಖಾಯಿಲೆ ಬರುವ ಸಾಧ್ಯತೆಯಿದೆಯಂತೆ.
ಸತತ ಉಗುರು ಕಡಿಯೋದ್ರಿಂದ ಉಗುರು ಮತ್ತು ಬೆರಳಿನ ಸುತ್ತ ಕಪ್ಪಾಗಿ ಹುಣ್ಣಾಗುತ್ತೆ. ಈ ಹುಣ್ಣಿನಿಂದ ಇನ್ಫೆಕ್ಷನ್ ಆಗಿ ಕೈಯಲ್ಲಿರುವ ವೈರಸ್ ಬಾಯಿಯ ಮೂಲಕ ಹೊಟ್ಟೆಯಲ್ಲಿ ಹೋಗಿ ಬೇರೆಯದೇ ರೋಗಗಳು ಬರಬಹುದು.
ಉಗುರು ಕಚ್ಚುವುದರಿಂದ ಹಲ್ಲಿನ ಎನಾಮೆಲ್ ಕೂಡ ಹಾಳಾಗುತ್ತೆ, ಇದರಿಂದ ಉಗುರಿನ ಆಕೃತಿ ಕೂಡ ಹಾಳಾಗುತ್ತೆ.
ಅಷ್ಟೇ ಅಲ್ಲದೆ ಉಗುರು ಕಚ್ಚುವರನ್ನು ಕಂಡರೆ ಯಾರಿಗೂ ಒಳ್ಳೆಯ ಅಭಿಪ್ರಾಯ ಬರಲು ಸಾಧ್ಯವಿರುವುದಿಲ್ಲ.