alex Certify ನಿಮಗೂ ಇದ್ಯಾ ʼಪೇಪರ್ ಗುಳ್ಳೆʼ ಒಡೆಯುವ ಹವ್ಯಾಸ…..? ಇಲ್ಲಿದೆ ಇದ್ರ ಬಗ್ಗೆ ಒಂದಿಷ್ಟು ಆಸಕ್ತಿದಾಯಕ ವಿಷಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಮಗೂ ಇದ್ಯಾ ʼಪೇಪರ್ ಗುಳ್ಳೆʼ ಒಡೆಯುವ ಹವ್ಯಾಸ…..? ಇಲ್ಲಿದೆ ಇದ್ರ ಬಗ್ಗೆ ಒಂದಿಷ್ಟು ಆಸಕ್ತಿದಾಯಕ ವಿಷಯ

ಮನೆಗೆ ಹೊಸ ವಸ್ತು ಬಂದಾಗ ಅದ್ರ ಜೊತೆ ಪೇಪರ್ ಬಬಲ್ ಬರುತ್ತದೆ. ಹೆಚ್ಚಿನ ಜನರು ಅದನ್ನು ಒಡೆಯಲು ಇಷ್ಟಪಡುತ್ತಾರೆ. ಜೊತೆಗೆ ಮಕ್ಕಳು ಮಾತ್ರವಲ್ಲ ವಯಸ್ಸಾದವರು ಕೂಡ ಮಕ್ಕಳಂತೆ ವರ್ತಿಸಲು ಪ್ರಾರಂಭಿಸುತ್ತಾರೆ.

ಸಂಶೋಧನೆಯೊಂದರ ಪ್ರಕಾರ, ಪ್ಯಾಕಿಂಗ್ ನಲ್ಲಿ ಬಳಸುವ ಪೇಪರ್ ಬಬಲ್ ಒಡೆಯುವುದರಿಂದ ಒತ್ತಡ ನಿವಾರಣೆಯಾಗುತ್ತದೆ. ಒಮ್ಮೆ ಗುಳ್ಳೆ ಒಡೆಯಲು ಪ್ರಾರಂಭಿಸಿದರೆ ಅದನ್ನು ನಿರಂತರವಾಗಿ ಮಾಡಲು ಬಯಸುತ್ತೇವೆ. ಅದು ಒಳ್ಳೆಯದು. ಇದನ್ನು ಮಾಡುವುದರಿಂದ ಒತ್ತಡ ದೂರವಾಗುವ ಜೊತೆಗೆ  ಒಬ್ಬರು ಒಂದೇ ಸ್ಥಳದಲ್ಲಿ ಗಮನ ಹರಿಸಬಹುದು. ಹೆಬ್ಬೆರಳು ಮತ್ತು ಮೊದಲ ಬೆರಳನ್ನು ಒಟ್ಟಿಗೆ ಸೇರಿಸಿದಾಗ ಮತ್ತು ಗುಳ್ಳೆಗಳು ಒಂದರ ನಂತರ ಒಂದರಂತೆ ಒಡೆಯಲು ಪ್ರಯತ್ನಿಸಿದಾಗ ಗಮನ ಒಂದೇ ಕಡೆ ಇರುತ್ತದೆ. ಬೆರಳುಗಳಿಗೆ ವ್ಯಾಯಾಮವಾಗುತ್ತದೆ.

ಬಬಲ್ ತುಂಬಾ ಆಕರ್ಷಕವಾಗಿದ್ದು, ಗಮನ ಸೆಳೆಯುತ್ತದೆ. ಅಧ್ಯಯನದ ಪ್ರಕಾರ 1 ನಿಮಿಷ ಬಬಲ್ ಒಡೆದರೆ ಅದು ಒತ್ತಡದ ಮಟ್ಟವನ್ನು ಶೇಕಡಾ 33 ರಷ್ಟು ಕಡಿಮೆ ಮಾಡುತ್ತದೆ. 30 ನಿಮಿಷಗಳ ಮಸಾಜ್ ನಿಂದಾಗುವ ಒತ್ತಡ ನಿವಾರಣೆ ಒಂದು ನಿಮಿಷ ಬಬಲ್ ಒಡೆಯುವುದರಿಂದಾಗುತ್ತದೆ. ಮಾತ್ರವಲ್ಲದೆ ಇದು ಮಾನಸಿಕ ಚಿಕಿತ್ಸೆಗೆ ಉತ್ತಮವಾಗಿದೆ.

ಪೇಪರ್ ಬಬಲ್ ಒಡೆಯುವವರಿಗೆ ಇಷ್ಟು ದಿನ ಇದ್ರ ಬಗ್ಗೆ ಗೊತ್ತಿಲ್ಲದೆ ಇರಬಹುದು. ಇನ್ಮುಂದೆ ಹೆಚ್ಚು ಬಬಲ್ ಒಡೆಯಿರಿ. ಇನ್ನೂ ಬಬಲ್ ಒಡೆದಿಲ್ಲ ಎನ್ನುವವರು ಈಗ್ಲೇ ಶುರು ಮಾಡಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...