ಬೆಳಿಗ್ಗೆ ಎದ್ದಾಕ್ಷಣ ಮೂಡ್ ಒಂದು ರೀತಿ ಬೇಜಾರು ಅನಿಸುತ್ತಿರುತ್ತದೆ. ಯಾವ ಕೆಲಸ ಮಾಡಿದರೂ ಮುಗಿಯುವುದಿಲ್ಲ ಎಂದು ಒಂದು ಕಡೆ ಅನಿಸಿದರೆ ಇನ್ನೊಂದು ಕಡೆ ದಿನಾ ಯಾರಪ್ಪಾ ಇದೇ ಕೆಲಸ ಮಾಡುವುದು ಅನಿಸ್ತಾ ಇರುತ್ತದೆ. ಬೇಗನೆ ತಾಳ್ಮೆ, ಕಳೆದುಕೊಳ್ಳುವುದರ ಜತೆಗೆ ಕಿರಿಕಿರಿ ಅನಿಸ್ತಾ ಇರುತ್ತದೆ. ಇದರಿಂದ ಹೊರಬರುವುದು ಹೇಗೆ…?
ಹಾಸಿಗೆಯಿಂದ ಏಳುವ ಮೊದಲು 5 ನಿಮಿಷ ಸುಮ್ಮನೆ ಮಲಗಿ. ಇವತ್ತು ಏನು ಮಾಡಬೇಕು ಎಂಬುದನ್ನು ಮೊದಲೇ ಯೋಚಿಸಿ. ಯಾವ ಕೆಲಸಕ್ಕೆ ಮೊದಲು ಮಹತ್ವ ಕೊಡಬೇಕು, ಎಲ್ಲಿಗೆ ಹೋಗಬೇಕು, ಏನು ಮಾಡಬಾರದು ಎಂಬುದನ್ನು ಯೋಚಿಸಿ ನಂತರ ಏಳಿ. ಇದರಿಂದ ಅರ್ಧ ಕಿರಿಕಿರಿ ಕಡಿಮೆಯಾಗುತ್ತದೆ.
ಇನ್ನು ಮಾಡುವ ಕೆಲಸವನ್ನು ಆದಷ್ಟು ಬೇಗನೆ ಮಾಡಿ ಮುಗಿಸುವುದಕ್ಕೆ ಟ್ರೈ ಮಾಡಿ. ಫೋನ್ ನಲ್ಲಿ ಅಥವಾ ಕಂಪ್ಯೂಟರ್ ಮುಂದೆ ಕುಳಿತು ಟೈಂ ವೇಸ್ಟ್ ಮಾಡಬೇಡಿ.
ಆದಷ್ಟು ಕಡಿಮೆ ಅವಧಿಯಲ್ಲಿ ಆಗುವ ತಿಂಡಿ, ಊಟವನ್ನು ತಯಾರು ಮಾಡಿ. ಜತೆಗೆ ಆರೋಗ್ಯದಾಯಕವಾದ ಆಹಾರ ಸೇವಿಸಿ. ಇದು ಕೂಡ ನಮ್ಮ ಮೂಡ್ ಮೇಲೆ ಪರಿಣಾಮ ಬೀರುತ್ತದೆ.