ಬಾಯಾರಿಕೆಯಿಂದ ಬಚಾವ್ ಆಗೋಕೆ ಬಾಟಲಿಯಲ್ಲಿ ನೀರನ್ನ ಹಾಕಿ ಫ್ರೀಜ್ ಮಾಡಲು ಇಡುತ್ತೇವೆ. ನಿಮಗೂ ಕೂಡ ಇಂತಹ ಅಭ್ಯಾಸ ಇದ್ದರೆ ಈ ಸ್ಟೋರಿಯನ್ನ ಓದಲೇಬೇಕು.
ಮಿನರಲ್ ವಾಟರ್ ಬಾಟಲಿಯನ್ನ ಒಂದೇ ಬಾರಿಗೆ ಬಳಕೆ ಮಾಡಬೇಕು. ಒಮ್ಮೆ ಬಳಕೆ ಮಾಡಿದ ಬಳಿಕ ಬಾಟಲಿಯನ್ನ ಎಸೆದುಬಿಡಬೇಕು. ಆದರೆ ಈ ಬಾಟಲಿಯನ್ನ ದೀರ್ಘಕಾಲದವರೆಗೆ ಬಳಕೆ ಮಾಡೋದ್ರಿಂದ ಆರೋಗ್ಯಕ್ಕೇ ಹಾನಿ ಉಂಟು ಮಾಡಬಹುದು.
ನೀವು ಬಾಟಲಿಯಲ್ಲಿ ನೀರನ್ನ ತುಂಬಿ ಫ್ರಿಜ್ನಲ್ಲಿ ಇಟ್ಟರೆ ಇದರಲ್ಲಿ ಅರ್ಸೆನಿಕ್, ಫ್ಲೋರೈಡ್ನಂತಹ ರಾಸಾಯನಿಕಗಳು ಉತ್ಪತ್ತಿ ಆಗಬಹುದು. ಇದರಿಂದ ನಿಮ್ಮ ದೇಹಕ್ಕೆ ಹಾನಿ ಉಂಟಾಗಲಿದೆ.
ಬಿಸಿ ಆದಷ್ಟು ಪ್ಲಾಸ್ಟಿಕ್ ಕರಗಲು ಆರಂಭಿಸುತ್ತದೆ. ನೀವು ಬಿಸಿ ನೀರನ್ನ ಪ್ಲಾಸ್ಟಿಕ್ ಬಾಟಲಿಯಲ್ಲಿ ಹಾಕಿಟ್ಟರೆ ಅದರ ಆಕಾರ ಬದಲಾಗುತ್ತದೆ ಅನ್ನೋದು ನಿಮಗೂ ತಿಳಿದಿದೆ. ಹೀಗಾಗಿ ಕಾರುಗಳಲ್ಲಿ ಪ್ಲಾಸ್ಟಿಕ್ ಬಾಟಲಿಯಲ್ಲಿ ತುಂಬಿದ ನೀರನ್ನ ಇಟ್ಟರೆ ಕಾರಿನ ಇಂಜಿನ್ ಬಿಸಿಯಾಗೋದ್ರಿಂದ ಬಾಟಲಿ ಕೂಡ ಬಿಸಿಯಾಗುತ್ತೆ. ಇದು ಬ್ರೆಸ್ಟ್ ಕ್ಯಾನ್ಸರ್ನಂತಹ ಮಾರಕ ಕಾಯಿಲೆಗೆ ಕಾರಣವಾಗಬಹುದು.
ಪ್ಲಾಸ್ಟಿಕ್ ಬಾಟಲಿಯಲ್ಲಿ ಹಾಕಿಟ್ಟ ನೀರನ್ನ ತುಂಬಾ ಸಮಯಗಳ ಕಾಲ ಶೇಖರಿಸಿ ಇಡೋದ್ರಿಂದ ನಿಮ್ಮ ರೋಗನಿರೋಧಕ ಶಕ್ತಿಯ ಮೇಲೂ ಪರಿಣಾಮ ಉಂಟಾಗಬಹುದು. ಇದರಲ್ಲಿ ಉತ್ಪತ್ತಿಯಾಗುವ ರಾಸಾಯನಿಕ ನಿಮ್ಮ ದೇಹದ ಮೇಲೆ ಮಾರಣಾಂತಿಕ ಪರಿಣಾಮ ಬೀರಲಿದೆ. phthalatesನಂತಹ ಅಂಶ ಲಿವರ್ ಕ್ಯಾನ್ಸರ್ಗೆ ಕಾರಣವಾಗುತ್ತೆ