ಯೋಗ, ಶಾರೀರಕ್ಕೆ ನೀಡುವ ವ್ಯಾಯಾಮ ಎಂದು ಅನೇಕರು ನಂಬಿದ್ದಾರೆ. ಆದ್ರೆ ಯೋಗ ಮನಸ್ಸು, ಆತ್ಮ, ಶರೀರವನ್ನು ಸಮತೋಲನಕ್ಕೆ ತರುವ ಪ್ರಕ್ರಿಯೆ. ಜ್ಯೋತಿಷ್ಯ ಹಾಗೂ ಯೋಗ ಪ್ರಾಚೀನ ಕಾಲದಿಂದಲೂ ಸಂಬಂಧ ಹೊಂದಿದೆ. ರಾಶಿಗೆ ಅನುಗುಣವಾಗಿ ಯೋಗಾಸನಗಳನ್ನು ಮಾಡುವುದ್ರಿಂದ ಸಿಗುವ ಲಾಭ ಹೆಚ್ಚೆಂದು ಜ್ಯೋತಿಷ್ಯದಲ್ಲಿ ಹೇಳಲಾಗಿದೆ.
ಅಗ್ನಿತತ್ವದ ರಾಶಿ ಮೇಷ. ಇವರು ಆತುರದಲ್ಲಿ ನಿರ್ಧಾರ ತೆಗೆದುಕೊಳ್ತಾರೆ. ಕೆಲವೊಮ್ಮೆ ಅತಿ ಬೇಗ ಕೋಪ ಇವರನ್ನು ಆವರಿಸುತ್ತದೆ. ಈ ರಾಶಿಯವರು ವೃಕ್ಷಾಸನ, ಶೀರ್ಷಾಸನವನ್ನು ಮಾಡುವುದು ಒಳ್ಳೆಯದು.
ವೃಷಭ ರಾಶಿಯವರು ಪೃಥ್ವಿ ತತ್ವವನ್ನು ಹೊಂದಿರುತ್ತಾರೆ. ಅನೇಕ ಬಾರಿ ಜಿದ್ದಿಗೆ ಬೀಳುವ ಇವರು ಜೀವನದಲ್ಲಿ ಕೆಲವೊಂದು ಯಡವಟ್ಟು ಮಾಡಿಕೊಳ್ತಾರೆ. ಇವರು ಪ್ರತಿ ದಿನ ಸೇತು ಆಸನ ಮಾಡಬೇಕು. ನಂತ್ರ ಧ್ಯಾನ ಮಾಡಬೇಕು.
ಮಿಥುನ ರಾಶಿಯ ಜನರು ಚಂಚಲರು. ವಾಯು ತತ್ವದ ರಾಶಿಯ ಜನರು ಅನೇಕ ಸಮಸ್ಯೆಗಳನ್ನು ಮೈಮೇಲೆಳೆದುಕೊಳ್ತಾರೆ. ಈ ರಾಶಿಯ ಜನರು ದುರ್ಬಲರಾಗಿರುತ್ತಾರೆ. ಹಾಗಾಗಿ ಧನುರಾಸನ ಮಾಡಬೇಕು. ಪ್ರಾಣಾಯಾಮವನ್ನು ನಿಯಮಿತವಾಗಿ ಮಾಡಬೇಕು.
ತಮ್ಮದೆ ಪ್ರಪಂಚದಲ್ಲಿರುವ ಕರ್ಕ ರಾಶಿಯ ಜನರು ಮಾನಸಿಕ ಅನಾರೋಗ್ಯಕ್ಕೆ ಎದುರಾಗುತ್ತಾರೆ. ಈ ರಾಶಿಯ ಜನರು ಪದ್ಮಾಸನ, ಭುಜಂಗಾಸನ, ನಟರಾಜಾಸನ, ಅನುಲೋಮ-ವಿಲೋಮ ಮಾಡಬೇಕು.
ಸಿಂಹ ರಾಶಿಯವರು ಬಹುಬೇಗ ಕೋಪಗೊಳ್ತಾರೆ. ಈ ರಾಶಿಯವರು ಮಂಡೂಕಾಸನ, ಮತ್ಯಾಸನ ಮಾಡಬೇಕು. ಸೂರ್ಯ ನಮಸ್ಕಾರವನ್ನೂ ಅವರು ಮಾಡಬೇಕು.
ಕನ್ಯಾ ರಾಶಿಯವರು ಗಮಂಡಿಗಳಾಗಿರ್ತಾರೆ. ಈ ರಾಶಿಯವರು ಮಯೂರ ಆಸನ, ಅನುಲೋಮ-ವಿಲೋಮ ಮಾಡಬೇಕು.
ತುಲಾ ರಾಶಿಯವರು ಬುದ್ಧಿವಂತರಾಗಿದ್ದರೂ ಮನಸ್ಸು ಚಂಚಲವಾಗಿರುತ್ತದೆ. ಇದ್ರಿಂದ ಪದೇ ಪದೇ ಸಮಸ್ಯೆಯಾಗುತ್ತದೆ. ಹಾಗಾಗಿ ಈ ರಾಶಿಯವರು ತಾಡಾಸನ, ಸಿದ್ಧಾಸನವನ್ನು ಮಾಡಬೇಕು.
ವೃಶ್ಚಿಕ ರಾಶಿಯವರಿಗೆ ಋತುವಿನ ರೋಗದ ಸಮಸ್ಯೆ ಹೆಚ್ಚಾಗುತ್ತದೆ. ಈ ರಾಶಿಯವರು ಮಕರಾಸನ, ಶವಾಸನ, ಧ್ಯಾನ ಮಾಡಬೇಕು.
ಧನು ರಾಶಿಯವರು ಹೆಚ್ಚು ಉತ್ತೇಜಿತರಾಗ್ತಾರೆ. ಈ ರಾಶಿಯವರು ಪವನಮುಕ್ತಾಸನ, ಧ್ಯಾನ ಮಾಡಬೇಕು.
ಮಕರ ರಾಶಿಯವರು ಆಲಸ್ಯ ಹೊಂದಿರುತ್ತಾರೆ. ಈ ರಾಶಿಯವರು ತಾಡಾಸನ ಮಾಡಬೇಕು. ಅನುಲೋಮ-ವಿಲೋಮವನ್ನು ಮಾಡಬೇಕು.
ಕುಂಭ ರಾಶಿಯವರು ಸ್ವಭಾವವನ್ನು ಸಮತೋಲನದಲ್ಲಿಡಲು ಕಪಾಲಬಾತಿ ಹಾಗೂ ಧ್ಯಾನವನ್ನು ಮಾಡಬೇಕು.
ಮೀನ ರಾಶಿಯವರು ಹೆಚ್ಚು ಆಲೋಚನೆ ಮಾಡುವವರಾಗಿದ್ದಾರೆ. ಈ ರಾಶಿಯವರು ಗರುಡಾಸನ, ವೃಕ್ಷಾಸನ ಮಾಡಬೇಕು.