ಗಂಡ, ಹೆಂಡತಿಗೆ ಹೊಡೆಯುವುದು ದೌರ್ಜನ್ಯದ ಸಂಕೇತ. ಹೆಂಡತಿಗೆ ಹೊಡೆಯುವ ಹಕ್ಕು ಪತಿಗೆ ಇರುವುದಿಲ್ಲ. ಅಂದಹಾಗೆ, ಇತ್ತೀಚೆಗೆ ಪಾಕಿಸ್ತಾನ ಟಿವಿ ಕಾರ್ಯಕ್ರಮವೊಂದರ ದೃಶ್ಯ ವೈರಲ್ ಆಗಿತ್ತು. ಇದಕ್ಕೆ ನೆಟ್ಟಿಗರು ವಿಭಿನ್ನ ರೀತಿಯಾಗಿ ಪ್ರತಿಕ್ರಿಸಿದ್ದರು.
ಹೌದು, ಟಿವಿ ಕಾರ್ಯಕ್ರಮವೊಂದರಲ್ಲಿ ಪತ್ನಿ ಮೇಲೆ ಕೋಪಗೊಂಡ ಪತಿಯು ತನ್ನ ಹೆಂಡತಿಗೆ ಕಪಾಳ ಮೋಕ್ಷ ಮಾಡುತ್ತಾನೆ. ಒಂದು ಸೆಕೆಂಡ್ ಸುಮ್ಮನಿದ್ದ ಪತ್ನಿಯು ಕೋಪ ತಡೆಯಲಾರದೆ ಪ್ರತೀಕಾರ ತೋರಿದ್ದಾಳೆ. ಅಂದರೆ ತಾನು ಕೂಡ ತನ್ನ ಗಂಡನ ಕಪಾಳ ಮೋಕ್ಷ ಮಾಡಿದ್ದಾಳೆ.
BIG BREAKING NEWS: ಆರೇ ದಿನದಲ್ಲಿ 6 ಕೋಟಿ ಡೋಸ್, ಲಸಿಕೆ ಅಭಿಯಾನದಲ್ಲಿ ಮತ್ತೊಂದು ದಾಖಲೆ
ಈ ವಿಡಿಯೋ ನೋಡಿದ ಹಲವರು ಆಕೆ ಮಾಡಿದ್ದು ಸರಿ. ಹೆಂಡತಿಗೆ ಹೊಡೆಯುವ ಹಕ್ಕು ಪತಿಗಿಲ್ಲ. ಆತ ಮಾಡಿದ್ದು ತಪ್ಪು. ಹೀಗಾಗಿ ಆಕೆ ಪ್ರತೀಕಾರ ತೋರಿರುವುದು ಸರಿಯಾಗಿದೆ ಅಂದ್ರೆ, ಇನ್ನೂ ಕೆಲವರು ಪತಿ ಹೊಡೆದಿರುವುದು ತಪ್ಪು. ಹಾಗಂತ ಪತ್ನಿ ಕೂಡ ಮಾಡಿದ್ದು ಸರಿಯಲ್ಲ ಎಂದು ಪ್ರತ್ರಿಯಿಸಿದ್ದಾರೆ.