ಯೋಗ ಮಾಡುವುದು ಆರೋಗ್ಯಕ್ಕೆ ತುಂಬಾ ಉತ್ತಮ. ಇದು ಹಲವಾರು ಸಮಸ್ಯೆಗಳ್ನು ಹೋಗಲಾಡಿಸುತ್ತದೆ. ಅಲ್ಲದೇ ಯೋಗ ಮಾಡುವುದು ಗರ್ಭಿಣೆಯರಿಗೂ ಕೂಡ ತುಂಬಾ ಉತ್ತಮ. ಹಾಗಾಗಿ ಮಹಿಳೆಯರು ಗರ್ಭಾವಸ್ಥೆಯಲ್ಲಿ ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದರೆ ಈ ಯೋಗಾಸನವನ್ನು ಅಭ್ಯಾಸ ಮಾಡಿ.
ವೀರಭದ್ರಾಸನ : ಈ ಆಸನವನ್ನು ಮಾಡಲು ಮೊದಲು ಯೋಗ ಚಾಪೆಯ ಮೇಲೆ ನಿಂತುಕೊಳ್ಳಿ. ನಂತರ ಒಂದು ಕಾಲನ್ನು ಹಿಂದಕ್ಕೆ ತೆಗೆದುಕೊಂಡು ಇನ್ನೊಂದು ಕಾಲನ್ನು ಮುಂದಕ್ಕೆ ತೆಗೆದುಕೊಳ್ಳಿ. ಎರಡೂ ಕೈಗಳನ್ನು ಮೇಲಕ್ಕೆತ್ತಿ, ನಿಮ್ಮ ಮೊಣಕಾಲುಗಳು ಸ್ವಲ್ಪ ಬಾಗಬೇಕು. ಈಗ ಕಾಲುಗಳನ್ನು ಜೋಡಿಸಿ. ಮತ್ತು ಇನ್ನೊಂದು ಬದಿಯಲ್ಲಿ ಅದೇ ರೀತಿ ಮಾಡಿ.
ಪರ್ವತಾಸನ : ಈ ಆಸನವನ್ನು ಮಾಡಲು ಮೊದಲನೇಯದಾಗಿ ಶಿಲುಬೆಯಂತೆ ಚಾಪೆಯ ಮೇಲೆ ಮಲಗಿಕೊಳ್ಳಿ. ಈಗ ಬೆನ್ನು ಮೂಳೆಯನ್ನು ಸಂಪೂರ್ಣವಾಗಿ ನೇರಗೊಳಿಸಿ, ನಂತರ ಎರಡೂ ಕೈಗಳನ್ನು ಮೇಲಕ್ಕೆ ತಂದು ನಮಸ್ತೆ ಸ್ಥಾನದಲ್ಲಿ ತನ್ನಿ. ನಂತರ ನಿಧಾನವಾಗಿ ಉಸಿರನ್ನು ಬಿಡುತ್ತಾ ನಿಮ್ಮ ಕೈಗಳನ್ನು ಕೆಳಗೆ ತಂದು ನಿಮ್ಮ ಮೊಣಕಾಲುಗಳ ಮೇಲೆ ಇರಿಸಿ.