ಕೆಲವರಿಗೆ ಹೊಟ್ಟೆ, ಕುತ್ತಿಗೆ, ಗಲ್ಲ, ತೋಳು, ತೊಡೆ, ಸೊಂಟ ಮುಂತಾದ ಕಡೆಗಳಲ್ಲಿ ಕೊಬ್ಬು ಸಂಗ್ರಹವಾಗುತ್ತದೆ. ಇದು ಅವರ ದೇಹದ ಆಕಾರವನ್ನು ಕೆಡಿಸುತ್ತದೆ ಮತ್ತು ಇದರಿಂದ ಅವರಿಗಿಷ್ಟವಾದ ಬಟ್ಟೆಗಳನ್ನು ಧರಿಸಲು ಆಗುವುದಿಲ್ಲ. ಅದರಲ್ಲೂ ತೊಡೆಯ ಕೊಬ್ಬಿನಿಂದಾಗಿ ಸರಿಯಾಗಿ ಪ್ಯಾಂಟ್ ಧರಿಸಲು ಸಾಧ್ಯವಾಗುವುದಿಲ್ಲ. ಹಾಗಾಗಿ ಈ ತೊಡೆಯ ಕೊಬ್ಬನ್ನು ಕರಗಿಸಲು ಪ್ರತಿದಿನ ಈ ಯೋಗಾಸನ ಮಾಡಿ.
ತ್ರಿಕೋನಾಸನ : ನೀವು ನೇರವಾಗಿ ನಿಂತುಕೊಳ್ಳಿ. ನಿಮ್ಮ ಪಾದಗಳ ನಡುವೆ ಸುಮಾರು 2 ಅಡಿ ಅಂತರವಿರಲಿ. ನಂತರ ನಿಮ್ಮ ಉಸಿರನ್ನು ದೀರ್ಘವಾಗಿ ತೆಗೆದುಕೊಂಡು ದೇಹವನ್ನು ಬಲಕ್ಕೆ ಬಗ್ಗಿಸಿ. ನಂತರ ನಿಮ್ಮ ಎಡಗೈಯನ್ನು ಮೇಲಕ್ಕೆ ತೆಗೆದುಕೊಂಡು ಹೋಗುವಾಗ ನಿಮ್ಮ ಕಣ್ಣುಸಗಳನ್ನು ಎಡಗೈಯ ಬೆರಳುಗಳ ಮೇಲೆ ಇರಿಸಿ. ಈ ಭಂಗಿಯಲ್ಲಿ ಸ್ವಲ್ಪ ಸಮಯವಿದ್ದು ನಂತರ ಸಾಮಾನ್ಯ ಸ್ಥಿತಿಗೆ ಬನ್ನಿ. ಇದನ್ನು ಇನ್ನೊಂದು ಬದಿಯಲ್ಲಿ ಮಾಡಿ.
ಉತ್ಕಟಾಸನ : ನೀವು ನಿಂತುಕೊಂಡು ನಿಮ್ಮ ಕಾಲುಗಳು ಮತ್ತು ಸೊಂಟವನ್ನು ಅಗಲವಾಗಿಸಿ. ಅಂಗೈಗಳು ಪರಸ್ಪರ ಎದುರಾಗಿರುವಂತೆ ನಿಮ್ಮ ತೋಳುಗಳನ್ನು ಮೇಲಕ್ಕೆತ್ತಿ. ಎರಡು ಮೊಣಕಾಲುಗಳನ್ನು ಬಗ್ಗಿಸಿ ಮತ್ತು ಸಿಟ್ ಬ್ಯಾಕ್ ಸ್ಥಾನಕ್ಕೆ ಬನ್ನಿ. ಹಾಗೇ ಮಾಡುವಾಗ ನಿಮ್ಮ ಹಿಮ್ಮಡಿಯ ಮೇಲೆ ಹೆಚ್ಚಿನ ತೂಕವನ್ನು ಹಾಕಿ. ಇದನ್ನು 60ಸೆಕೆಂಡುಗಳ ಕಾಲ ಮಾಡಿ
ನೌಕಾಸನ : ಇದನ್ನು ಮಾಡಲು ಚಾಪೆಯ ಮೇಲೆ ಬೆನ್ನಿನ ಮೇಲೆ ಮಲಗಿ ಮತ್ತು ನಿಮ್ಮ ಎರಡು ಕಾಲುಗಳನ್ನು ಮೇಲಕ್ಕೆತ್ತಿ. ನಂತರ ನಿಮ್ಮ ಕೈಗಳಿಂದ ಸೊಂಟದ ಮುಂದೆ ಇರಿಸಿ ಬೆನ್ನನ್ನು ಎತ್ತಲು ಪ್ರಯತ್ನಿಸಿ. ಸುಮಾರು 30 ಸೆಕೆಂಡುಗಳ ಕಾಲ ಈ ಭಂಗಿಯಲ್ಲಿ ಇರಿ.
ಈ ಯೋಗಾಸನಗಳನ್ನು ಪ್ರತಿದಿನ ಮಾಡಿ ನಿಮ್ಮ ತೊಡೆಯ ಕೊಬ್ಬನ್ನು ಕರಗಿಸಿಕೊಂಡು ಫಿಟ್ ಆಗಿರಿ.
………………………………………………………………………….