alex Certify ಸಣ್ಣ ಮತ್ತು ದೊಡ್ಡ ಕರುಳಿನ ಚಲನೆಯನ್ನು ಹೆಚ್ಚಿಸಲು ಪ್ರತಿದಿನ ಈ ಯೋಗ ಮಾಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಣ್ಣ ಮತ್ತು ದೊಡ್ಡ ಕರುಳಿನ ಚಲನೆಯನ್ನು ಹೆಚ್ಚಿಸಲು ಪ್ರತಿದಿನ ಈ ಯೋಗ ಮಾಡಿ

ದೇಹದಲ್ಲಿ ಸಣ್ಣ ಕರುಳು ಆಹಾರವನ್ನು ಒಡೆದು ಪೋಷಕಾಂಶಗಳನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ದೊಡ್ಡ ಕರುಳು ಜೀರ್ಣವಾಗದ ವಸ್ತುಗಳಿಂದ ನೀರು ಮತ್ತು ಲವಣಗಳನ್ನು ಹೀರಿಕೊಂಡು ತ್ಯಾಜ್ಯ ಉತ್ಪನ್ನಗಳನ್ನು ಹೊರಹಾಕುತ್ತದೆ.

ಈ ಕಾರ್ಯ ಉತ್ತಮ ರೀತಿಯಲ್ಲಿ ನಡೆದರೆ ಮಾತ್ರ ನಮ್ಮ ದೇಹ ಆರೋಗ್ಯವಾಗಿರುತ್ತದೆ. ಹಾಗಾಗಿ ಸಣ್ಣ ಮತ್ತು ದೊಡ್ಡ ಕರುಳಿನ ಚಲನೆ ಉತ್ತಮವಾಗಿಸಲು ಈ ಯೋಗ ಮಾಡಿ.

ಸುಚಿ ಮುದ್ರಾ : ಇದನ್ನು ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕಾಗಿ ಮಾಡಲಾಗುತ್ತದೆ. ಇದು ಮಲಬದ್ಧತೆ, ಒತ್ತಡ, ಕೋಪ ಮತ್ತು ಅನೇಕ ಆರೋಗ್ಯ ಸಮಸ್ಯೆಗಳನ್ನು ನಿವಾರಿಸುತ್ತದೆ. ಹಾಗಾಗಿ ಇದನ್ನು ಮಾಡಲು ನಿಮ್ಮ ಎರಡೂ ಕೈಯ ಮುಷ್ಟಿಗಳನ್ನು ಬಿಗಿಗೊಳಿಸಿ ಅವುಗಳನ್ನು ನಿಮ್ಮ ಎದೆಯ ಮುಂದೆ ಇರಿಸಿ. ಬಲಗೈಯನ್ನು ಮುಂದೆ ಚಾಚಿ ತೋರು ಬೆರಳನ್ನು ಮೇಲಕ್ಕೆ ತೋರಿಸಿ. ಈ ಭಂಗಿಯಲ್ಲಿ ಆರು ಬಾರಿ ಉಸಿರಾಡಿ ನಂತರ ಆರಂಭಿಕ ಸ್ಥಾನಕ್ಕ ಬನ್ನಿ.

ಆಕಾಶ ಮುದ್ರಾ : ಸುಖಾಸನ ಅಥವಾ ಪದ್ಮಾಸನ ಭಂಗಿಯಲ್ಲಿ ಕುಳಿತುಕೊಳ್ಳಿ. ನಿಮ್ಮ ಬೆನ್ನನ್ನು ನೇರವಾಗಿಸಿ. ನಿಮ್ಮ ಹೆಬ್ಬೆರಳು ಮತ್ತು ಮಧ್ಯದ ಬೆರಳುಗಳ ತುದಿಗಳು ಪರಸ್ಪರ ಸ್ಪರ್ಶಿಸಲಿ ನಿಮ್ಮ ಉಳಿದ ಬೆರಳುಗಳನ್ನು ನೇರಗೊಳಿಸಿ. ಇದನ್ನು ಎರಡು ಕೈಗಳಿಂದ ಮಾಡಿ. ಮತ್ತು ನಿಮ್ಮ ಅಂಗೈಗಳ ಹಿಂಭಾಗವನ್ನು ನಿಮ್ಮ ಮೊಣಕಾಲುಗಳ ಮೇಲೆ ಇರಿಸಿ. ನಿಮ್ಮ ಕಣ್ಣುಗಳನ್ನು ಮುಚ್ಚಿ. ಮತ್ತು ನಿಮ್ಮ ಗಮನವನ್ನು ನಿಮ್ಮ ಉಸಿರಾಟದ ಕಡೆಗೆ ಇರಿಸಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...