ದೀಪಾವಳಿಯ ಎರಡನೇ ದಿನ ನರಕ ಚತುರ್ದಶಿ. ಶಾಸ್ತ್ರಗಳ ಪ್ರಕಾರ ಶುದ್ಧತೆ ಹಾಗೂ ಸ್ವಚ್ಛತೆ ಇರುವ ಮನೆಯಲ್ಲಿ ಲಕ್ಷ್ಮಿ ನೆಲೆಸಿರ್ತಾಳೆ. ಲಕ್ಷ್ಮಿಯನ್ನು ಒಲಿಸಿಕೊಳ್ಳಲು ಜನ ಮನೆಯನ್ನು ಸ್ವಚ್ಛಗೊಳಿಸಿ ಸಿಂಗಾರ ಮಾಡ್ತಾರೆ. ಅಲಂಕಾರಿಕ ವಸ್ತುಗಳನ್ನು ಖರೀದಿಸಿ ಮನೆ ಸೌಂದರ್ಯ ಹೆಚ್ಚಿಸುತ್ತಾರೆ.
ಮನೆಯ ಜೊತೆ ತಮ್ಮ ಸೌಂದರ್ಯಕ್ಕೂ ಜನರು ಇಂದು ಮಹತ್ವ ನೀಡ್ತಾರೆ. ಬೆಳಿಗ್ಗೆ ಎದ್ದು ಸ್ನಾನ ಮಾಡುವ ಮುನ್ನ ತಲೆ, ದೇಹದ ಎಲ್ಲ ಭಾಗಗಳಿಗೆ ಎಣ್ಣೆ ಹಚ್ಚಿಕೊಂಡು ಸ್ನಾನ ಮಾಡುವ ಪದ್ಧತಿ ರೂಢಿಯಲ್ಲಿದೆ. ಎಣ್ಣೆ ಸ್ನಾನದ ಜೊತೆ ರಾತ್ರಿ 14 ದೀಪಗಳನ್ನು ಹಚ್ಚುವ ಪರಂಪರೆಯಿದೆ.
ಮನೆಯನ್ನು ಸ್ವಚ್ಛಗೊಳಿಸುವ ವೇಳೆ ಕೆಲವೊಂದು ವಿಷಯಗಳ ಬಗ್ಗೆ ಗಮನ ನೀಡಬೇಕಾಗುತ್ತದೆ. ಹಾಳಾದ ವಸ್ತುಗಳನ್ನು ಮನೆಯಿಂದ ಹೊರಗೆಸೆಯಬೇಕು. ಖಾಲಿಯಾದ ಡಬ್ಬ, ರದ್ದಿ, ಒಡೆದ ಮಡಿಕೆ, ಗಾಜು, ಮುರಿದ ಪಿಠೋಪಕರಣಗಳನ್ನು ಬಳಸಬಾರದು. ಅವುಗಳನ್ನು ಮನೆಯಿಂದ ಹೊರಗೆಸೆಯಬೇಕು.
ನಾಲ್ಕು ಬತ್ತಿಯ ಮಣ್ಣಿನ ದೀಪವನ್ನು ಪೂರ್ವಕ್ಕೆ ಮುಖ ಮಾಡಿ ಮನೆಯ ಮುಖ್ಯ ದ್ವಾರದಲ್ಲಿ ಹಚ್ಚಬೇಕು. ಹಳದಿ ಬಣ್ಣದ ಬಟ್ಟೆ ಧರಿಸಿ ಯಮನ ಪೂಜೆ ಮಾಡಬೇಕು.