ನಿದ್ರೆ ಗರ್ಭಿಣಿಯರಿಗೆ ತುಂಬಾ ಮುಖ್ಯ. ಆದರೆ ಕೆಲವು ಗರ್ಭಿಣಿಯರು ನಿದ್ರಾಹೀನತೆ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ವಾಕರಿಕೆ, ಮೂತ್ರ ವಿಸರ್ಜನೆ, ಮತ್ತು ಆತಂಕ ಈ ನಿದ್ರಾಹೀನ ಸಮಸ್ಯೆಗೆ ಕಾರಣವಾಗಿದೆ. ಈ ಸಮಸ್ಯೆಯನ್ನು ನಿವಾರಿಸಲು ಗರ್ಭಿಣಿಯರು ಪ್ರತಿದಿನ ಈ ಕೆಲಸ ಮಾಡಿ.
*ಗರ್ಭಿಣಿಯರು ಪ್ರತಿದಿನ ವ್ಯಾಯಾಮ ಮಾಡಿ. ಇದು ನಿಮಗೆ ಉತ್ತಮವಾದ ನಿದ್ರೆ ಮಾಡಲು ಸಹಕಾರಿ. ಬೆಳಿಗ್ಗೆ ಮತ್ತು ಸಂಜೆ ವಾಕಿಂಗ್, ಸರಳವಾದ ವ್ಯಾಯಾಮ ಮಾಡಿ.
*ಗರ್ಭಾವಸ್ಥೆಯಲ್ಲಿ ಶಾಂತವಾಗಿರಲು ಪ್ರಯತ್ನಿಸಿ. ಇದು ನಿಮಗೆ ಉತ್ತಮ ನಿದ್ರೆ ಮಾಡಲು ಸಹಕಾರಿಯಾಗಿದೆ. ಹಾಗೇ ವಿಶ್ರಾಂತಿ ಪಡೆಯುವಂತಹ ಸರಳವಾದ ಯೋಗಾಸನಗಳನ್ನು ಮಾಡಿ. ಧ್ಯಾನ ಮಾಡಲು, ಹಿತವಾದ ಸಂಗೀತ ಕೇಳಲು ಅಥವಾ ಮಲಗುವ ಮುನ್ನ ಪುಸ್ತಕಗಳನ್ನು ಓದಲು ಸಹ ಪ್ರಯತ್ನಿಸಬಹುದು.