ಮದುವೆ ಮುಹೂರ್ತ ನಿಗದಿಯಾಗ್ತಿದ್ದಂತೆ ಹುಡುಗಿ ಸೌಂದರ್ಯದ ಬಗ್ಗೆ ಮತ್ತಷ್ಟು ಕಾಳಜಿ ವಹಿಸ್ತಾಳೆ. ಬ್ಯೂಟಿ ಪಾರ್ಲರ್ ನಲ್ಲಿ ಸಮಯ ಕಳೆಯುತ್ತಾಳೆ. ಕೈ, ಕಾಲು, ಮುಖ, ಕೂದಲು ಅಂತಾ ಚೆಂದ ಕಾಣಲು ಬೇಕಾದ ಎಲ್ಲ ತಯಾರಿ ಮಾಡಿಕೊಳ್ತಾಳೆ. ಇದ್ರಲ್ಲಿ ಹುಡುಗರು ಹಿಂದೆ ಬಿದ್ದಿದ್ದಾರೆ. ಮಾಡೋದೆ ಇಲ್ಲ ಎಂದಲ್ಲ. ಹುಡುಗಿಯರಿಗೆ ಹೋಲಿಸಿದ್ರೆ ಬ್ಯೂಟಿ ಪಾರ್ಲರ್ ಗೆ ಹೋಗುವ ಹಾಗೂ ತಮ್ಮ ಸೌಂದರ್ಯದ ಬಗ್ಗೆ ಹೆಚ್ಚಿನ ಗಮನ ನೀಡುವ ಹುಡುಗರ ಸಂಖ್ಯೆ ಗಣನೀಯವಾಗಿ ಕಡಿಮೆ ಇದೆ.
ಮದುವೆ ಸಮಾರಂಭದಲ್ಲಿ ಹುಡುಗಿ ಹಾಗೂ6ಇಬ್ಬರೂ ಸುಂದರವಾಗಿ ಕಾಣಬೇಕು. ಹಾಗಾಗಿ ವಧುವಿನಷ್ಟೇ ವರ ಕೂಡ ಸೌಂದರ್ಯದ ಬಗ್ಗೆ ಗಮನ ಹರಿಸಬೇಕು. ಕೆಲವೊಂದು ಅವಶ್ಯಕ ಬ್ಯೂಟಿ ಟಿಪ್ಸ್ ಗಳನ್ನು ಅಳವಡಿಸಿಕೊಂಡ್ರೆ ಸಾಕು.
ಸಾಮಾನ್ಯವಾಗಿ ವರ ಮದುವೆ ಹಿಂದಿನ ದಿನ ಹೇರ್ ಸ್ಟೈಲ್ ಮಾಡಲು ಹೋಗ್ತಾನೆ. ಯಾವಾಗ್ಲೂ ಮದುವೆಗೆ 10 ದಿನ ಮುಂಚಿತವಾಗ್ಲೇ ಹೇರ್ ಕಟ್ ಮಾಡಿಸಬೇಕು.
ಹುಡುಗಿಯರಂತೆ ಹುಡುಗರು ಕೂಡ ಮೆನಿಕ್ಯೂರ್ ಮಾಡಿಸಿಕೊಳ್ಳುವುದು ಉತ್ತಮ. ಮದುವೆ ದಿನ ಸಮಾರಂಭಕ್ಕೆ ಬರುವವರ ಕಣ್ಣು ನಿಮ್ಮ ಕೈ ಹಾಗೂ ಉಗುರುಗಳನ್ನೂ ನೋಡುತ್ತದೆ ಎಂಬುದು ಗಮನದಲ್ಲಿರಲಿ.
ಮದುವೆ ದಿನ ಬೆಳ್ಳಗೆ, ಸುಂದರವಾಗಿ ಕಾಣಬಯಸಬೇಕೆಂದಿದ್ದರೆ ಒಂದು ವಾರದಿಂದಲೇ ಶೇವಿಂಗ್ ಮಾಡಲು ಶುರುಮಾಡಿ. ಪ್ರತಿದಿನ ಶೇವಿಂಗ್ ಮಾಡಿ. ಜೊತೆಗೆ ಮದುವೆ ದಿನ ಕೂಡ ಶೇವಿಂಗ್ ಮಾಡಿ.
ಹಾಗೆ ಫೇಶಿಯಲ್ ಕೂಡ ಮಾಡಿಸಿಕೊಳ್ಳಿ. ಒಂದು ವಾರದ ಮೊದಲೇ ಫೇಶಿಯಲ್ ಮಾಡಿಸುವುದು ಒಳ್ಳೆಯದು.
ಎದೆಯ ಮೇಲಿರುವ ಕೂದಲನ್ನು ತೆಗೆಯಿರಿ. ವ್ಯಾಕ್ಸ್ ಮಾಡೋಕೆ ಇಷ್ಟಪಡಲ್ಲ ಎಂದಾದ್ರೆ ಕೂದಲನ್ನು ಟ್ರಿಮ್ ಮಾಡಿಕೊಳ್ಳಿ.