ಜ್ಯೋತಿಷ್ಯ ಶಾಸ್ತ್ರದಲ್ಲಿ ಬುಧವಾರವನ್ನು ಗಣೇಶನಿಗೆ ಅರ್ಪಿಸಲಾಗಿದೆ. ಹಾಗೆ ಬುಧ ಗ್ರಹದ ದಿನವೆಂದು ಪರಿಗಣಿಸಲಾಗಿದೆ. ಬುಧ ಬುದ್ಧಿ ಹಾಗೂ ಧನ ಪ್ರಾಪ್ತಿಯ ಗ್ರಹವೆಂದು ಪರಿಗಣಿಸಲಾಗಿದೆ. ಬುದ್ಧಿ ದೋಷ ಹಾಗೂ ಧನ ನಷ್ಟ ಜೀವನದಲ್ಲಿ ದುಃಖ, ಅಸಫಲತೆಗೆ ಕಾರಣವಾಗುತ್ತದೆ.
ಬುಧ ದೋಷದ ಶಾಂತಿ ಹಾಗೂ ಗಣೇಶನ ಕೃಪೆಗಾಗಿ ಜ್ಯೋತಿಷ್ಯದಲ್ಲಿ ಬೇರೆ ಬೇರೆ ಉಪಾಯಗಳನ್ನು ಹೇಳಲಾಗಿದೆ. ಶ್ರಾವಣ ಮಾಸದ ಬುಧವಾರದಲ್ಲಿ ಮಾಡುವ ಕೆಲಸ ಫಲ ನೀಡುತ್ತದೆ ಎಂದು ನಂಬಲಾಗಿದೆ.
ಬುಧವಾರ ಶ್ರೀಗಣೇಶನ ಜೊತೆ ತಾಯಿ ದುರ್ಗಾ ದೇವಿಯ ಪೂಜೆ ಮಾಡಿ. ಮಂತ್ರ ಜಪಿಸಿ.
ಓಂ ಭುಂ ಬುಧಾಯ ನಮಃ ಮಂತ್ರವನ್ನು ಸ್ಫಟಿಕ ಮಾಲೆ ಹಿಡಿದು 108 ಬಾರಿ ಜಪಿಸಿ.
ಬುಧ ಗ್ರಹಕ್ಕೆ ಸಂಬಂಧಿಸಿದ ವಸ್ತುಗಳನ್ನು ದಾನ ಮಾಡಿ. ಹಸಿರು ಬಟ್ಟೆ, ತುಪ್ಪ, ಕಂಚಿನ ವಸ್ತು, ಕರ್ಪೂರವನ್ನ ದಾನ ಮಾಡಿ.
ಗೋಮಾತೆಯನ್ನು ಪೂಜೆ ಮಾಡಿ ತಿಂಡಿ ಜೊತೆ ಬೆಲ್ಲ ಸೇರಿಸಿ ನೀಡಿ. ಪೂಜಿಸಿದ ಗೋಮಾತೆಗೆ ಹುಲ್ಲನ್ನು ನೀಡಿ.
ಶ್ರೀಗಣೇಶನಿಗೆ ದರ್ಭೆಯ ಮಾಲೆ ಅಥವಾ ಉಂಡೆಯ ಮಾಲೆಯನ್ನು ಅರ್ಪಿಸಿ.