ಹಿಂದೂ ಧರ್ಮದಲ್ಲಿ ವಿಜಯ ದಶಮಿಗೆ ವಿಶೇಷ ಮಹತ್ವವಿದೆ. ಅಂದು ತಾಯಿ ದುರ್ಗೆ ತನ್ನ ಭಕ್ತರಿಗೆ ಕೃಪೆ ತೋರುತ್ತಾಳೆಂಬ ನಂಬಿಕೆಯಿದೆ. ರಾವಣನ ಸಂಹಾರವಾದ ದಿನ ವಿಜಯದಶಮಿ. ಅಂದು ದುಷ್ಟರ ಸಂಹಾರವಾಗಿ ಶಿಷ್ಟರ ರಕ್ಷಣೆಯಾಗುತ್ತದೆ.
ಧರ್ಮಗ್ರಂಥಗಳ ಪ್ರಕಾರ ವಿಜಯ ದಶಮಿಯಂದು ಹೊಸ ಕೆಲಸ ಶುರು ಮಾಡುವುದು ಶುಭಕರವೆಂದು ಪರಿಗಣಿಸಲಾಗಿದೆ. ಇದ್ರಿಂದ ಅತ್ಯಂತ ವೇಗವಾಗಿ ಉತ್ತಮ ಫಲ ಲಭಿಸುತ್ತದೆ.
ವಿಜಯದಶಮಿಯಂದು ಶಮಿ ಮರವನ್ನು ಅವಶ್ಯವಾಗಿ ಪೂಜಿಸಬೇಕು. ಮನೆಯ ಮುಂದೆ ಶಮಿ ಮರವಿಲ್ಲದೆ ಹೋದಲ್ಲಿ ಅವಶ್ಯವಾಗಿ ಗಿಡ ನೆಡಿ. ನಿಯಮಿತವಾಗಿ ದೀಪ ಹಚ್ಚಿ. ಈ ದಿನ ಶಮಿ ಮರವನ್ನು ಪೂಜೆ ಮಾಡುವುದರಿಂದ ಸುಖ-ಶಾಂತಿ, ಸಂಪತ್ತು ಸದಾ ನೆಲೆಸಿರುತ್ತದೆ.
ವಿಜಯದಶಮಿಯಂದು ರಾವಣನ ಸಂಹಾರವಾದ ಮೇಲೆ ಮರದ ತುಂಡುಗಳು ಉಳಿದ್ರೆ ಅದನ್ನು ತಂದು ಮನೆಯಲ್ಲಿ ಸುರಕ್ಷಿತವಾಗಿಡಿ. ಇದ್ರಿಂದ ನಕಾರಾತ್ಮಕ ಶಕ್ತಿಗಳು ಮನೆಯನ್ನು ಪ್ರವೇಶ ಮಾಡುವುದಿಲ್ಲ.
ಅಂದು ಹನುಮಂತನ ಪೂಜೆ ಮಾಡುವುದರಿಂದ ಸಂತೋಷ ಪ್ರಾಪ್ತಿಯಾಗುತ್ತದೆ. ಜೀವನದಲ್ಲಿ ಭಯ ದೂರವಾಗಿ ಪ್ರಗತಿ, ಮೋಕ್ಷ ಲಭಿಸುತ್ತದೆ.
ವಿಜಯದಶಮಿಯಂದು ನೀಲಕಂಠ ಪಕ್ಷಿಯ ದರ್ಶನ ಪಡೆಯಬೇಕು. ಈ ದಿನ ನೀಲಕಂಠ ಪಕ್ಷಿ ದರ್ಶನವಾದ್ರೆ ಎಲ್ಲ ಕಷ್ಟಗಳು ದೂರವಾಗಲಿವೆ ಎಂಬ ನಂಬಿಕೆಯಿದೆ.
ಜಿಲೇಬಿ ಹಾಗೂ ಐದು ಬಗೆಯ ಮಿಠಾಯಿಯನ್ನು ಭೈರವನಾಥನಿಗೆ ಅರ್ಪಿಸಬೇಕು. ಅಂದು ಭೈರವನಾಥನ ಪೂಜೆ ಮಾಡುವುದ್ರಿಂದ ಜೀವನದ ಎಲ್ಲ ಅಡೆತಡೆಗಳು ದೂರವಾಗುತ್ತದೆ.
ವಿಜಯದಶಮಿಯಂದು ಕೆಂಪು ಬಣ್ಣದ ಹೊಸ ಬಟ್ಟೆಯನ್ನು ತಾಯಿ ದುರ್ಗೆ ಪಾದದಡಿಯಿಟ್ಟು ಪೂಜೆ ಮಾಡುವ ಜೊತೆಗೆ ಅದನ್ನು ಮನೆಯ ಕಪಾಟಿನಲ್ಲಿಡಬೇಕು.