ನಾಡಿನೆಲ್ಲೆಡೆ ನಾಗರ ಪಂಚಮಿ ಹಬ್ಬ ಆಚರಿಸಲಾಗ್ತಿದೆ. ನಾಗರ ಪಂಚಮಿಯಂದು ನಾಗ ದೇವನ ಪೂಜೆ ನಡೆಯುತ್ತದೆ. ಅನೇಕರ ಜಾತಕದಲ್ಲಿ ನಾಗರ ದೋಷ, ಕಾಳ ಸರ್ಪ ದೋಷಗಳಿರುತ್ತವೆ. ಅಂತವರು ನಾಗರ ಪಂಚಮಿಯಂದು ವಿಶೇಷ ಕೆಲಸ ಮಾಡುವ ಮೂಲಕ ದೋಷವನ್ನು ಪರಿಹರಿಸಿಕೊಳ್ಳಬಹುದು.
ನಾಗರ ಪಂಚಮಿಯಂದು ನಾಗ-ನಾಗಿನ್ ಜೋಡಿಯನ್ನು ಹಾವು ಗೊಲ್ಲರ ಬಳಿ ಖರೀದಿ ಮಾಡಿ ಅವುಗಳನ್ನು ಕಾಡಿನಲ್ಲಿ ಬಿಡಬೇಕು. ಇದ್ರಿಂದ ದೋಷ ಪರಿಹಾರವಾಗುತ್ತದೆ.
ಶಿವಲಿಂಗದ ಬಳಿ ಹಾವಿರುವ ದೇವಸ್ಥಾನಕ್ಕೆ ಹೋಗಿ ಪಂಚ ಲೋಹದ ಹಾವನ್ನು ಅರ್ಪಿಸಿ. ಅದಕ್ಕೆ ಪಂಜಾಮೃತ ಅರ್ಪಿಸುವ ಮೂಲಕ ಶಿವ ಮತ್ತು ನಾಗನನ್ನು ಪೂಜೆ ಮಾಡಿ.
ಪರಿಮಳಯುಕ್ತ ಹೂಗಳು ಹಾಗೂ ಶ್ರಿಗಂಧದಿಂದ ನಾಗರ ಪೂಜೆ ಮಾಡಬೇಕು.
ಸಂಜೆ ಸಮಯದಲ್ಲಿ ಶಿವಲಿಂಗದ ಮುಂದೆ ತುಪ್ಪದ ದೀಪವನ್ನು ಅರ್ಪಿಸುವುದ್ರಿಂದ ಕಾಳ ಸರ್ಪ ದೋಷ ನಿವಾರಣೆಯಾಗುತ್ತದೆ.