ಈ ಬಾರಿ ಮಾರ್ಚ್ 8ರಂದು ಮಹಾಶಿವರಾತ್ರಿಯನ್ನು ಆಚರಿಸಲಾಗುತ್ತದೆ. ಮಹಾಶಿವರಾತ್ರಿಯ ಸಮಯದಲ್ಲಿ ಕೆಲವೊಂದು ಪರಿಹಾರಗಳನ್ನು ಅನುಸರಿಸಿದ್ರೆ ಮದುವೆ ವಿಳಂಬವಾಗುತ್ತಿರುವವರಿಗೆ ಶೀಘ್ರ ಕಂಕಣಬಲ ಕೂಡಿ ಬರುತ್ತದೆ.
ಮದುವೆ ವಿಳಂಬವಾಗುತ್ತಿರುವ ಯುವಕ-ಯುವತಿಯರು ಮಹಾಶಿವರಾತ್ರಿಯ ದಿನದಂದು ಹಳದಿ ಬಣ್ಣದ ಬಟ್ಟೆಗಳನ್ನು ಧರಿಸಬೇಕು. ಈ ದಿನ ಹಳದಿ ಬಣ್ಣದ ಬಟ್ಟೆಗಳನ್ನು ಧರಿಸುವುದು ವಿಶೇಷ ಮಹತ್ವವನ್ನು ಹೊಂದಿದೆ. ಅಷ್ಟೇ ಅಲ್ಲ ಈ ದಿನದಂದು ಶಿವ ಮತ್ತು ಪಾರ್ವತಿಗೆ ಮಾರಿಗೋಲ್ಡ್ ಹೂವಿನ ಹಾರವನ್ನು ಅರ್ಪಿಸಿ.
ಶಿವರಾತ್ರಿಯ ದಿನದಂದೇ ಶಿವ-ಪಾರ್ವತಿಯ ವಿವಾಹ ನೆರವೇರಿತ್ತು. ಅದಕ್ಕಾಗಿಯೇ ಈ ದಿನ ಬಹಳ ವಿಶೇಷವಾಗಿದೆ. ಹಾಗಾಗಿ ಶಿವರಾತ್ರಿ ದಿನ ಶಿವ ಮತ್ತು ಪಾರ್ವತಿಯನ್ನು ಪೂಜಿಸುವುದರಿಂದ ಶೀಘ್ರದಲ್ಲೇ ಮದುವೆ ನಿಶ್ಚಯವಾಗುತ್ತದೆ. ಪೂಜೆಯ ಸಮಯದಲ್ಲಿ, “ಓಂ ಗೌರಿ ಶಂಕರಾಯ ನಮಃ” ಎಂಬ ಮಂತ್ರವನ್ನು 108 ಬಾರಿ ಜಪಿಸಬೇಕು.
ಮಹಾಶಿವರಾತ್ರಿಯ ದಿನದಂದು ಈಶ್ವರನನ್ನು ಪೂಜಿಸಿ. ಶಿವ ದೇವಾಲಯಕ್ಕೆ ಹೋಗಿ ಹಸುವಿನ ಹಾಲಿನಿಂದ ಶಿವನಿಗೆ ರುದ್ರಾಭಿಷೇಕ ಮಾಡಿ. ಹೀಗೆ ಮಾಡುವುದರಿಂದ ಶಿವ ಸಂತುಷ್ಟನಾಗುತ್ತಾನೆ.
ಮದುವೆಗೆ ಅಡಚಣೆಗಳನ್ನು ಎದುರಿಸುತ್ತಿರುವವರು ಮಹಾಶಿವರಾತ್ರಿಯ ದಿನ ಶ್ರೀ ರಾಮಚರಿತಮಾನಸದಲ್ಲಿ ವಿವರಿಸಿರುವ ಶಿವ ಪಾರ್ವತಿ ವಿವಾಹವನ್ನು ಪಠಿಸಬೇಕು. ಹೀಗೆ ಮಾಡುವುದರಿಂದ ಮದುವೆ ಬೇಗ ಆಗುತ್ತದೆ.