ಲಕ್ಷ್ಮಿ ದೇವತೆಯನ್ನು ಪ್ರಸನ್ನಗೊಳಿಸಿದರೆ ಜೀವನ ಪೂರ್ತಿ ನಿಮಗೆ ಧನ- ಧಾನ್ಯದ ಕೊರತೆಯೇ ಆಗುವುದಿಲ್ಲ. ಸಿರಿವಂತಿಕೆ ನಿಮ್ಮದಾಗುತ್ತದೆ.
ಶುಕ್ರವಾರ ಲಕ್ಷ್ಮಿಯ ದಿನವೆಂದು ಹೇಳಲಾಗುತ್ತದೆ. ಹಾಗಾಗಿ ಶುಕ್ರವಾರ ಲಕ್ಷ್ಮಿದೇವಿಯನ್ನು ಸಂತುಷ್ಟಗೊಳಿಸಿದರೆ ನಿಮ್ಮ ಇಷ್ಟಾರ್ಥಗಳು ಈಡೇರುತ್ತವೆ. ಅದಕ್ಕೆ ನೀವು ಮಾಡಬೇಕಾಗಿರುವುದು ಇಷ್ಟೇ,
ಶುಕ್ರವಾರ ಬೆಳಗ್ಗೆ ಶುಭ್ರವಾಗಿ ಸ್ನಾನ ಮಾಡಿ. ಬಿಳಿ ಅಥವಾ ಕೆಂಪು ಬಟ್ಟೆ ಧರಿಸಿಕೊಂಡು ಲಕ್ಷ್ಮಿಗೆ ಪೂಜೆ ಸಲ್ಲಿಸಿ.
‘ಓಂ ಶ್ರೀ ಶ್ರೀಯೇ ನಮಃ’ ಎಂಬ ಮಂತ್ರವನ್ನು 108 ಬಾರಿ ಪಠಿಸಿ.
ಲಕ್ಷ್ಮಿಮಾತೆಗೆ ಧೂಪದ್ರವ್ಯ ಅತ್ಯಂತ ಪ್ರಿಯವಾದದ್ದು ಎಂಬ ನಂಬಿಕೆ ಇದೆ. ಹಾಗಾಗಿ ಪೂಜೆಯ ಸಮಯದಲ್ಲಿ ಧೂಪದ್ರವ್ಯ ಅಥವಾ ಅಗರ್ಬತ್ತಿಯನ್ನು ಹಚ್ಚಲು ಮರೆಯಬೇಡಿ.
ಶಾಸ್ತ್ರಜ್ಞರು ಹೇಳುವ ಪ್ರಕಾರ ಲಕ್ಷ್ಮಿಗೆ ಸಿಹಿ ಪದಾರ್ಥಗಳ ನೈವೇದ್ಯ ಮಾಡುವುದು ಅತ್ಯಂತ ಶ್ರೇಷ್ಠವಾದುದು. ಲಕ್ಷ್ಮಿಗೆ ಗಣಪತಿ ಅತ್ಯಂತ ಪ್ರಿಯವಾದವನು, ಗಣಪತಿಗೆ ಲಾಡು ಅಂದ್ರೆ ಬಹಳ ಇಷ್ಟ. ಹಾಗಾಗಿ ಶುಕ್ರವಾರ ನೀವು ಲಾಡು ಮಾಡಿ ಲಕ್ಷ್ಮಿಗೆ ನೈವೇದ್ಯ ಮಾಡಬಹುದು. ಪಾಯಸ ಕೂಡ ಲಕ್ಷ್ಮಿಗೆ ಅತ್ಯಂತ ಪ್ರಿಯವಾದ ತಿನಿಸುಗಳಲ್ಲೊಂದು.
ಲಕ್ಷ್ಮಿಯ ಧ್ಯಾನ ಮಾಡುವ ಸಂದರ್ಭದಲ್ಲಿ ಕೈಯಲ್ಲಿ ಒಂದು ಅಡಿಕೆ ಮತ್ತು ತಾಮ್ರದ ನಾಣ್ಯವನ್ನು ಇಟ್ಟುಕೊಳ್ಳಿ.
ಪೂಜೆಯ ನಂತರ ಕನ್ಯೆಯರಿಗೆ ಅನ್ನದಾನ ಮಾಡುವುದು ಅತ್ಯಂತ ಶ್ರೇಷ್ಠ. ಅದು ಸಾಧ್ಯವಾಗದೇ ಇದ್ದಲ್ಲಿ ದಾನ-ಧರ್ಮ ಮಾಡಿ.