ಶ್ರೀಮಂತರಾಗಲು ಪ್ರತಿಯೊಬ್ಬರೂ ಬಯಸ್ತಿದ್ದಾರೆ. ಹಗಲಿರುಳು ದುಡಿದ್ರೂ ಕೆಲವರ ಕೈನಲ್ಲಿ ಹಣವಿರುವುದಿಲ್ಲ. ಕೆಲವೊಂದು ಉಪಾಯದ ಮೂಲಕ ಶಾಶ್ವತವಾಗಿ ಬಡತನ ದೂರ ಮಾಡಬಹುದು.
ಶುಕ್ರವಾರವನ್ನು ತಾಯಿ ಲಕ್ಷ್ಮಿ ದಿನವೆನ್ನಲಾಗುತ್ತದೆ. ಲಕ್ಷ್ಮಿ ಸಂಪತ್ತಿನ ದೇವತೆ. ಪ್ರತಿ ಶುಕ್ರವಾರ ತಾಯಿ ಲಕ್ಷ್ಮಿ ಹೆಸರಿನಲ್ಲಿ ವೃತ ಮಾಡಬೇಕು. ಶ್ರದ್ಧೆಯಿಂದ ವೃತ ಮಾಡಿದ್ರೆ ಪ್ರಸನ್ನಗೊಳ್ಳುವ ತಾಯಿ, ಭಕ್ತರಿಗೆ ವರ ನೀಡ್ತಾಳೆ.
ಶುಕ್ರವಾರ ಬಡವರಿಗೆ ಬಿಳಿ ಬಟ್ಟೆ ಅಥವಾ ಅಕ್ಕಿಯಂತಹ ಬಿಳಿ ವಸ್ತುಗಳನ್ನು ದಾನ ಮಾಡಬೇಕು. ತಾಯಿಯ ಆಶೀರ್ವಾದವು ಯಾವಾಗಲೂ ಭಕ್ತರ ಮೇಲಿರುತ್ತದೆ. ಶುಕ್ರವಾರ ಹಸುವಿಗೆ ಆಹಾರ ನೀಡುವ ಮೂಲಕ ತಾಯಿ ಸಂತೋಷಗೊಳಿಸಿದ್ರೆ ಸಂಪತ್ತು ವೃದ್ಧಿಯಾಗುತ್ತದೆ.
ಶುಕ್ರವಾರ ಲಕ್ಷ್ಮಿ ದೇವಿಗೆ ಅಕ್ಕಿ ಅರ್ಪಿಸಬೇಕು. ಈ ದಿನ ಅಗತ್ಯವಿರುವ ಜನರಿಗೆ ಸಹಾಯ ಮಾಡಬೇಕು. ಮಾ ಲಕ್ಷ್ಮಿ ಇದ್ರಿಂದ ಸಂತೋಷಗೊಳ್ತಾಳೆ. ಶೀಘ್ರದಲ್ಲಿ ಆರ್ಥಿಕ ವೃದ್ಧಿಯನ್ನು ಕಾಣಬಹುದು.
ನವಿಲು ನೃತ್ಯ ಮಾಡುವ ಜಾಗಕ್ಕೆ ಬೆಳ್ಳಂಬೆಳಿಗ್ಗೆ ಹೋಗಿ ಅಲ್ಲಿನ ಮಣ್ಣನ್ನು ಮನೆಗೆ ತನ್ನಿ. ಅದನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿ ಪವಿತ್ರ ಸ್ಥಳದಲ್ಲಿಡಿ. ಪ್ರತಿ ದಿನ ಅದ್ರ ಪೂಜೆ ಮಾಡುವುದ್ರಿಂದ ಧನಲಾಭವಾಗುತ್ತದೆ.