ಧಾರ್ಮಿಕ ಗ್ರಂಥಗಳಲ್ಲಿ ಕಾರ್ತಿಕ ಮಾಸಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ. ಕಾರ್ತಿಕ ಮಾಸದಲ್ಲಿ 7 ನಿಯಮಗಳನ್ನು ಮಂಗಳವೆಂದು ಪರಿಗಣಿಸಲಾಗಿದೆ. ಕೆಲ ನಿಯಮಗಳನ್ನು ಪಾಲಿಸುವುದ್ರಿಂದ ಶುಭ ಫಲ ಪ್ರಾಪ್ತಿಯಾಗಲಿದೆ. ಜೊತೆಗೆ ಮನೋಕಾಮನೆಗಳು ಈಡೇರಲಿವೆ.
ಕಾರ್ತಿಕ ಮಾಸದಲ್ಲಿ ಪ್ರಮುಖ ಕೆಲಸ ದೀಪ ದಾನ. ನದಿ, ಕೆರೆ, ಹೊಳೆಯಲ್ಲಿ ದೀಪವನ್ನು ದಾನ ಮಾಡುವುದು ಶ್ರೇಷ್ಠ. ಇದ್ರಿಂದ ಪುಣ್ಯ ಪ್ರಾಪ್ತಿಯಾಗಲಿದೆ.
ಪ್ರತಿ ದಿನ ತುಳಸಿ ಪೂಜೆ ಮಾಡುವುದು ಶುಭಕರ. ಅದ್ರಲ್ಲೂ ಕಾರ್ತಿಕ ಮಾಸದಲ್ಲಿ ಪ್ರತಿದಿನ ತುಳಸಿ ಪೂಜೆ ಮಾಡಿದ್ರೆ ಹೆಚ್ಚಿನ ಫಲ ಸಿದ್ಧಿಯಾಗಲಿದೆ. ಸೂರ್ಯಾಸ್ತದ ವೇಳೆ ತುಳಸಿಗೆ ಆಕಳ ತುಪ್ಪದ ದೀಪ ಹಚ್ಚಿದ್ರೆ ಮಂಗಳಕರ.
ಭೂಮಿ ಮೇಲೆ ಮಲಗುವುದು ಕಾರ್ತಿಕ ಮಾಸದ ಮೂರನೇ ಬಹು ಮುಖ್ಯ ಕೆಲಸ. ಭೂಮಿ ಮೇಲೆ ಮಲಗುವುದರಿಂದ ಸಾತ್ವಿಕ ಭಾವನೆಯುಂಟಾಗಿ ಮನಸ್ಸಿನ ವಿಕಾರ ಭಾವನೆ ತೊಲಗುತ್ತದೆ.
ಕಾರ್ತಿಕ ಮಾಸದಲ್ಲಿ ಎಣ್ಣೆ ಸ್ನಾನ ಮಾಡುವುದು ಅಶುಭ. ಕೇವಲ ನರಕ ಚತುರ್ದಶಿ ದಿನ ಮಾತ್ರ ಎಣ್ಣೆ ಸ್ನಾನ ಮಾಡಬೇಕು.
ಕಾರ್ತಿಕ ಮಾಸದಲ್ಲಿ ದ್ವಿದಳ ಧಾನ್ಯಗಳ ಸೇವನೆ ಮಾಡಬಾರದು.
ಕಾರ್ತಿಕ ಮಾಸದಲ್ಲಿ ಬ್ರಹ್ಮಚರ್ಯ ಪಾಲನೆ ಮಾಡಬೇಕು. ಇದನ್ನು ಪಾಲಿಸದಿದ್ದಲ್ಲಿ ಪತಿ-ಪತ್ನಿಗೆ ದೋಷವುಂಟಾಗುತ್ತದೆ. ಅಶುಭ ಫಲ ಪ್ರಾಪ್ತಿಯಾಗುತ್ತದೆ.
ವೃತ ಮಾಡುವವರ ರೀತಿಯಲ್ಲಿ ಜೀವನ ನಡೆಸಬೇಕು. ಅಂದ್ರೆ ಕಡಿಮೆ ಮಾತನಾಡುವುದು ಹಾಗೂ ಬೇರೆಯವರ ನಿಂದನೆ ಮಾಡದೆ, ಕೋಪ ಮಾಡಿಕೊಳ್ಳದೆ ಸದಾ ಶಾಂತವಾಗಿರಬೇಕು.