
ಪಿತೃ ಪಕ್ಷದಲ್ಲಿ ದಾನ, ಧರ್ಮಕ್ಕೆ ಹೆಚ್ಚಿನ ಮಹತ್ವವಿದೆ. ತಾಯಿ ಲಕ್ಷ್ಮಿ ಆರಾಧನೆ ಮಾಡಬೇಕೆಂದು ಹೇಳಲಾಗುತ್ತದೆ. ಲಕ್ಷ್ಮಿ, ಸಂಪತ್ತು, ಆಸ್ತಿಯ ದೇವತೆ. ಲಕ್ಷ್ಮಿ ಒಲಿದ್ರೆ ಧನ, ಗೌರವ, ಸಂಪತ್ತು, ಸಂತೋಷ ಪಾಪ್ತಿಯಾಗುತ್ತದೆ. ಮುನಿದ್ರೆ ಬಡತನ, ನೋವು, ಕಷ್ಟ ನಿಶ್ಚಿತ.
ಲಕ್ಷ್ಮಿ ಪೂಜೆಯಿಂದ ಸಂಪತ್ತು ಮಾತ್ರ ಪ್ರಾಪ್ತಿಯಾಗುವುದಿಲ್ಲ. ಗೌರವ, ಹೆಸ್ರು ಪ್ರಾಪ್ತಿಯಾಗುತ್ತದೆ. ವೈವಾಹಿಕ ಜೀವನವೂ ಸುಖಕರವಾಗಿರುತ್ತದೆ. ಎಷ್ಟೇ ಸಂಪತ್ತಿನ ಸಮಸ್ಯೆಯಿರಲಿ ಸರಿಯಾಗಿ ಲಕ್ಷ್ಮಿ ಪೂಜೆ ಮಾಡಿದ್ರೆ ಧನ ಪ್ರಾಪ್ತಿಯಾಗುತ್ತದೆ. ಪಿತೃ ಪಕ್ಷದಲ್ಲೂ ತಾಯಿ ಲಕ್ಷ್ಮಿಯ ಪೂಜೆ ಮಾಡಲಾಗುತ್ತದೆ. ಪೂರ್ವಜರ ಜೊತೆ ತಾಯಿ ಲಕ್ಷ್ಮಿಯ ಕೃಪೆ ದೊರೆಯುತ್ತದೆ.
ನೌಕರಿ, ಉದ್ಯೋಗದಲ್ಲಿ ಲಾಭವಾಗಬೇಕೆಂದ್ರೆ ಉದ್ಯೋಗ ಸ್ಥಳದಲ್ಲಿ ತಾಯಿ ಲಕ್ಷ್ಮಿ, ಗಣೇಶ ಹಾಗೂ ವಿಷ್ಣುವಿನ ಫೋಟೋ ಹಾಕಬೇಕು. ಲಕ್ಷ್ಮಿಯ ಬಲ ಭಾಗದಲ್ಲಿ ವಿಷ್ಣು ಹಾಗೂ ಎಡ ಭಾಗದಲ್ಲಿ ಗಣೇಶನ ಫೋಟೋ ಇರಬೇಕು. ಬೆಳಿಗ್ಗೆ ಕೆಲಸ ಮಾಡುವ ಮೊದಲು ಫೋಟೋಕ್ಕೆ ಒಂದು ಗುಲಾಬಿ ಹೂವನ್ನು ಹಾಕಿ. ತುಪ್ಪದ ದೀಪ ಹಚ್ಚಿ, ಗುಲಾಬಿ ಪರಿಮಳದ ಧೂಪ ಹಚ್ಚಿ.
ಉದ್ಯೋಗ ಸ್ಥಳದಲ್ಲಿ ಲಕ್ಷ್ಮಿ ಕಮಲದ ಮೇಲೆ ಕುಳಿತಿರುವ ಫೋಟೋವನ್ನು ಕೂಡ ಹಾಕಬಹುದು. ಎರಡೂ ಕಡೆ ಆನೆ ನಿಂತಿದ್ದು ನೀರು ಸುರಿಸುತ್ತಿದ್ದರೆ ಬಹಳ ಒಳ್ಳೆಯದು. ಬೆಳಿಗ್ಗೆ ಹಾಗೂ ಸಂಜೆ ತುಪ್ಪದ ದೀಪವನ್ನು ಹಚ್ಚಿ.