ಯಾವುದೆ ಕೆಲಸದ ಆರಂಭ ಶುಭವಾಗಿದ್ದರೆ ಕೆಲಸ ಪೂರ್ಣಗೊಂಡಂತೆ. ಹಾಗೆ ದಿನದ ಆರಂಭ ಚೆನ್ನಾಗಿದ್ದರೆ ದಿನ ಸಂತೋಷದಿಂದ ಕಳೆಯುತ್ತದೆ. ದಿನವಿಡೀ ಉತ್ಸಾಹ, ಶಕ್ತಿ ಇರಬೇಕೆಂದ್ರೆ ಬೆಳಿಗ್ಗೆ ಚೆನ್ನಾಗಿರಬೇಕು.
ದಿನವಿಡೀ ಶಕ್ತಿಯುತವಾಗಿ ಮತ್ತು ಸಂತೋಷವಾಗಿರಲು, ಆಹಾರದಿಂದ ಹಿಡಿದು ಬೆಳಿಗ್ಗೆ ವ್ಯಾಯಾಮದವರೆಗೆ ಎಲ್ಲವನ್ನೂ ಗಮನಿಸಬೇಕು. ದಿನವನ್ನು ಧ್ಯಾನದಿಂದ ಪ್ರಾರಂಭಿಸಬೇಕು. ಪ್ರತಿದಿನ ಬೆಳಿಗ್ಗೆ ಧ್ಯಾನ ಮಾಡಲು ಸುಮಾರು 5 ರಿಂದ 10 ನಿಮಿಷಗಳನ್ನು ನೀಡಬೇಕು. ಇದು ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ. ದಿನವಿಡೀ ಸಂತೋಷ ಸಿಗುತ್ತದೆ.
ಶಕ್ತಿಯುತವಾಗಿರಲು ದೇಹದಲ್ಲಿ ಆಮ್ಲಜನಕದ ಅಗತ್ಯವಿದೆ. ಬೆಳಿಗ್ಗೆ 5 ನಿಮಿಷಗಳ ಕಾಲ ಉಸಿರಾಟಕ್ಕೆ ಸಂಬಂಧಿಸಿದ ವ್ಯಾಯಾಮ ಮಾಡಬೇಕು.
ದೇಹವನ್ನು ಶಕ್ತಿಯುತವಾಗಿಡಲು ಬೆಳಿಗ್ಗೆ ಬೆಚ್ಚಗಿನ ನೀರಿಗೆ ನಿಂಬೆ ರಸವನ್ನು ಹಾಕಿ ಕುಡಿಯಬೇಕು. ನಿಂಬೆಯಲ್ಲಿರುವ ವಿಟಮಿನ್ ಸಿ, ಮನಸ್ಥಿತಿಯನ್ನು ಸುಧಾರಿಸುತ್ತದೆ. ಬೆಳಿಗ್ಗೆ ಎದ್ದ ತಕ್ಷಣ ಸುಂದರ ಹಾಡುಗಳನ್ನು ಕೇಳಬೇಕು. ಯಾವುದೇ ಕಾರಣಕ್ಕೂ ಸಾಮಾಜಿಕ ಜಾಲತಾಣವನ್ನು ವೀಕ್ಷಿಸಬೇಡಿ. ಇದು ಮನಸ್ಥಿತಿಯನ್ನು ಹಾಳು ಮಾಡುತ್ತದೆ. ಹಾಗಾಗಿ ಬೆಳಿಗ್ಗೆ ಎದ್ದ ತಕ್ಷಣ ಮೊಬೈಲ್ ನಿಂದ ದೂರವಿರಿ.