ಇನ್ನೇನು ಕೆಲವೇ ಗಂಟೆಗಳಲ್ಲಿ ಹೊಸ ವರ್ಷ ಶುರುವಾಗಲಿದೆ. ಹೊಸ ವರ್ಷ 2021 ರಲ್ಲಿ ಮಹಾಲಕ್ಷ್ಮಿ ಕೃಪೆಗೆ ಪಾತ್ರರಾಗಲು ಬಯಸುವವರು ಮನೆಯಲ್ಲಿರುವ ಅಶುಭ ವಸ್ತುಗಳನ್ನು ಹೊರಗೆ ಹಾಕಿ. ಯಾರ ಮನೆಯಲ್ಲಿ ಅಶುಭ ವಸ್ತುಗಳಿರುತ್ತವೆಯೋ ಆ ಮನೆಗೆ ಲಕ್ಷ್ಮಿ ಪ್ರವೇಶ ಮಾಡುವುದಿಲ್ಲ. ಅಪ್ಪಿತಪ್ಪಿ ಮಾಡಿದ್ರೂ ತುಂಬಾ ಸಮಯ ಮನೆಯಲ್ಲಿರುವುದಿಲ್ಲ.
ಮನೆಯಲ್ಲಿ ಅಶುಭ ವಸ್ತುಗಳಿರುವುದ್ರಿಂದ ನಕಾರಾತ್ಮಕ ಶಕ್ತಿ ಮನೆ ಪ್ರವೇಶ ಮಾಡುತ್ತದೆ. ಮನೆಯಲ್ಲಿ ಅಶಾಂತಿ ನೆಲೆಸುತ್ತದೆ. ಹಾಗಾಗಿ ಹೊಸ ವರ್ಷಾರಂಭಕ್ಕಿಂತ ಮೊದಲೇ ಮನೆಯಲ್ಲಿರುವ ಅಶುಭ ವಸ್ತುಗಳನ್ನು ಮನೆಯಿಂದ ಹೊರ ಹಾಕಿ.
ಮನೆಯಲ್ಲಿ ಮಣ್ಣಿನ ದೀಪವಿದ್ದು, ಅದು ಬಿರುಕು ಬಿಟ್ಟಿದ್ದರೆ ತಕ್ಷಣ ಆ ದೀಪವನ್ನು ದೇವರ ಮನೆಯಿಂದ ತೆಗೆದು ಕಸಕ್ಕೆ ಹಾಕಿ. ಪೂಜೆ ವೇಳೆ ಬಿರುಕು ಬಿಟ್ಟ ದೀಪ ಹಚ್ಚುವುದ್ರಿಂದ ಪೂಜೆ ಫಲ ನೀಡುವುದಿಲ್ಲ.
ದೇವರ ಮನೆಯಲ್ಲಿ ಮುರಿದ ಮೂರ್ತಿಗಳಿದ್ದರೆ ಅದನ್ನೂ ತೆಗೆದು ಹಾಕಿ. ಎಂದೂ ಮುರಿದ ಮೂರ್ತಿಯ ದೇವರ ಪೂಜೆ ಮಾಡಬಾರದು.
ಕೆಲವರ ಅಡುಗೆ ಮನೆಯಲ್ಲಿ ಹಾಳಾದ ಪಾತ್ರೆಗಳಿರುತ್ತವೆ. ಇದು ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ. ಜೊತೆಗೆ ಮನೆಯಲ್ಲಿ ಅಶಾಂತಿಯುಂಟು ಮಾಡುತ್ತದೆ. ವಾಸ್ತುದೋಷಕ್ಕೆ ಕಾರಣವಾಗುತ್ತದೆ. ಹಾಗಾಗಿ ಮನೆಯಲ್ಲಿ ಎಂದೂ ಹಾಳಾದ ಪಾತ್ರೆಯನ್ನು ಇಡಬೇಡಿ.
ಒಡೆದ ಕನ್ನಡಿ, ಮುರಿದ ಮಂಚವನ್ನೂ ಮನೆಯಲ್ಲಿಟ್ಟುಕೊಳ್ಳಬೇಡಿ. ಇದು ಕೂಡ ವಾಸ್ತು ದೋಷಕ್ಕೆ ಕಾರಣವಾಗುತ್ತದೆ. ಮನೆಯಲ್ಲಿ ಅನೇಕ ಸಮಸ್ಯೆಗಳನ್ನುಂಟು ಮಾಡುತ್ತದೆ. ತಂದೆ-ಮಗನ ಜೊತೆ ಅಶಾಂತಿಯುಂಟಾಗುತ್ತದೆ.
ನಿಂತಿರುವ ಗಡಿಯಾರವನ್ನು ಮನೆಯಲ್ಲಿಡಬಾರದು. ಇದು ಆರ್ಥಿಕ ಸಮಸ್ಯೆಗೆ ಕಾರಣವಾಗುತ್ತದೆ. ಕುಟುಂಬಸ್ಥರಿಗೆ ಎಂದೂ ಯಶಸ್ಸು ಸಿಗುವುದಿಲ್ಲ.
ಮನೆಯಲ್ಲಿರುವ ಫೋಟೋ ಹಾಳಾಗಿದ್ದರೆ ಅದನ್ನು ತಕ್ಷಣ ತೆಗೆದುಹಾಕಿ. ಇದು ವಾಸ್ತುದೋಷಕ್ಕೆ ಕಾರಣವಾಗುತ್ತದೆ.
ಮನೆಯ ಮುಖ್ಯ ದ್ವಾರ ಅಥವಾ ಯಾವುದೇ ಬಾಗಿಲು ಬಿರುಕುಬಿಟ್ಟಿದ್ದರೆ ಹಾಗೂ ಖುರ್ಚಿ ಹಾಳಾಗಿದ್ದರೆ ಅದನ್ನು ಮನೆಯಲ್ಲಿಟ್ಟುಕೊಳ್ಳುವುದು ಶುಭವಲ್ಲ.