ನೆಮ್ಮದಿಯಾಗಿ ಜೀವನ ಸಾಗಿಸಬೇಕೆಂದು ಎಲ್ಲರೂ ಆಸೆಪಡ್ತಾರೆ. ನೆಮ್ಮದಿ ಜೀವನಕ್ಕೆ ದುಡಿಮೆ ಜೊತೆಗೆ ಅದೃಷ್ಟ, ವಾಸ್ತು ಕೂಡ ಮಹತ್ವದ ಪಾತ್ರ ವಹಿಸುತ್ತದೆ. ಹಾಗಾಗಿ ಹೊಸ ವರ್ಷ ಕೆಲವೊಂದು ಬದಲಾವಣೆಗಳನ್ನು ನಿಮ್ಮ ಮನೆ ಹಾಗೂ ಕಚೇರಿಯಲ್ಲಿ ತಂದು ಸುಖ ಜೀವನ ನಿಮ್ಮದಾಗಿಸಿಕೊಳ್ಳಿ.
ಮನೆ ಹಾಗೂ ಕಚೇರಿ ಮುಖ್ಯ ದ್ವಾರದಲ್ಲಿ ಸ್ವಸ್ತಿಕ್, ಓಂ, ಶ್ರೀ ಚಿನ್ಹೆಯನ್ನು ರಚಿಸಿ. ಇದರಿಂದ ಮನೆ ಹಾಗೂ ಕಚೇರಿಯನ್ನು ಧನಾತ್ಮಕ ಶಕ್ತಿ ಪ್ರವೇಶ ಮಾಡುತ್ತದೆ.
ಮನೆಯ ಈಶಾನ್ಯ ಭಾಗದಲ್ಲಿ ಲಾಫಿಂಗ್ ಬುದ್ಧನ ಪ್ರತಿಮೆ ಅಥವಾ ಚಿತ್ರವನ್ನು ಹಾಕಿ.
ವಾಸ್ತು ಪ್ರಕಾರ ಮನೆ ಹಾಗೂ ಅಂಗಡಿಗೆ ಹೊಸ ವರ್ಷ ಬಣ್ಣ ಬಳಿಯಿರಿ. ನೀಲಿ, ಬಿಳಿ, ಹಳದಿ, ಹಸಿರು ಬಣ್ಣವನ್ನು ಗೋಡೆಗೆ ಬಳಿಯುವುದು ಉತ್ತಮ.
ಮನೆಯಲ್ಲಿ ಮನಿ ಟ್ರೀ, ಬಿದಿರು ಅಥವಾ ತುಳಸಿ ಸಸಿಯನ್ನು ನೆಡಿ.
ಹೊಸ ವರ್ಷ ಮನೆ ಹಾಗೂ ಕಚೇರಿಯಲ್ಲಿರುವ ಕಸವನ್ನು ಹೊರಗೆ ಹಾಕಿ. ಉತ್ತರ ದಿಕ್ಕು ಅದೃಷ್ಟದ ಸಂಕೇತ. ಹಾಗಾಗಿ ಉತ್ತರ ದಿಕ್ಕಿನಲ್ಲಿ ಹಾಳಾದ ವಸ್ತುಗಳನ್ನು ಇಡಬೇಡಿ.
ಮನೆಯ ಈಶಾನ್ಯ ದಿಕ್ಕಿನಲ್ಲಿ ಅಕ್ವೇರಿಯಂ ಇಡುವುದು ಶುಭಕರ.
ಶೌಚಾಲಯದ ಪಕ್ಕದಲ್ಲಿ ದೇವರ ಮನೆ ಇರದಂತೆ ನೋಡಿಕೊಳ್ಳಿ. ವಾಸ್ತು ಪ್ರಕಾರ ದೇವರ ಮನೆ ಇರಲಿ.
ಸೂರ್ಯಾಸ್ತದ ನಂತ್ರ ಮನೆ ಅಥವಾ ಕಚೇರಿಯನ್ನು ಸ್ವಚ್ಛಗೊಳಿಸಬೇಡಿ. ಇದರಿಂದ ದೇವಿ ಲಕ್ಷ್ಮಿ ಮುನಿಸಿಕೊಳ್ತಾಳೆ. ವಾಸ್ತು ಶಾಸ್ತ್ರದ ಈ ಸಣ್ಣಪುಟ್ಟ ಉಪಾಯಗಳನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡು ಅಭಿವೃದ್ಧಿ ಕಂಡುಕೊಳ್ಳಿ.