ಬಿಳಿ ಕರ್ಪೂರಕ್ಕೆ ಬಹಳ ಮಹತ್ವವಿದೆ. ದೇವರ ಪೂಜೆಗೆ ಕರ್ಪೂರವನ್ನು ಬಳಸ್ತಾರೆ. ಇದು ಎಲ್ಲರಿಗೂ ತಿಳಿದಿರುವ ವಿಚಾರ. ಅನಾದಿ ಕಾಲದಿಂದಲೂ ದೇವರ ಮುಂದೆ ಬೆಳಗುವ ಈ ಕರ್ಪೂರಕ್ಕೆ ಅಪಾರ ಶಕ್ತಿಯಿದೆ.
ಬಿಳಿ ಕರ್ಪೂರವನ್ನು ದೇವರ ಮುಂದೆ ಬೆಳಗುವುದ್ರಿಂದ ದೇವಾನುದೇವತೆಗಳು ಸಂತೋಷಗೊಳ್ಳುತ್ತಾರೆ. ಅಪಾರ ಪುಣ್ಯ ಪ್ರಾಪ್ತಿಯಾಗುತ್ತದೆ. ಇದ್ರ ಜೊತೆಗೆ ಪಿತೃ ದೋಷ ನಿವಾರಣೆಯಾಗುತ್ತದೆ ಎಂಬ ನಂಬಿಕೆಯೂ ಇದೆ.
ಮನೆಯಲ್ಲಿ ಶಾಂತಿ ಹಾಗೂ ಸಕಾರಾತ್ಮಕ ಶಕ್ತಿ ಸದಾ ನೆಲೆಸಿರಬೇಕೆಂದಾದಲ್ಲಿ ಬೆಳಿಗ್ಗೆ ಹಾಗೂ ಸಂಜೆ ದೀಪದ ಜೊತೆ ಕರ್ಪೂರವನ್ನು ಹಚ್ಚಬೇಕು. ಹಾಗೆ ಇಡೀ ಮನೆಗೆ ಈ ದೀಪವನ್ನು ತೋರಿ ಸುವಾಸನೆ ಹರಡುವಂತೆ ಮಾಡಿ. ಇದ್ರಿಂದ ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ಓಡಿ ಹೋಗುತ್ತದೆ. ಸುಖ ನಿದ್ರೆ ಪ್ರಾಪ್ತಿಯಾಗುತ್ತದೆ.
ವಾಸ್ತು ದೋಷ ನಿವಾರಣೆ ಮಾಡುವ ಶಕ್ತಿ ಕರ್ಪೂರಕ್ಕಿದೆ. ವಾಸ್ತು ದೋಷವಿರುವ ಮನೆಯ ಜಾಗಕ್ಕೆ ಕರ್ಪೂರದ ದೀಪ ಬೆಳಗಿದ್ರೆ ನಿಧಾನವಾಗಿ ವಾಸ್ತುದೋಷ ಕಡಿಮೆಯಾಗುತ್ತ ಬರುತ್ತದೆ.
ಕರ್ಪೂರದ ವಾಸನೆಯಿಂದ ಮನೆಯಲ್ಲಿರುವ ಕೀಟಾಣುಗಳ ನಾಶವಾಗುತ್ತದೆ. ರೋಗ ನಿವಾರಣೆಯಾಗುತ್ತದೆ. ಅನಿದ್ರೆ ದೂರವಾಗುತ್ತದೆ.