ಮನುಷ್ಯನ ಏಳಿಗೆ, ಸುಖ-ಸಂತೋಷ, ಆರೋಗ್ಯ-ಐಶ್ವರ್ಯಕ್ಕೆ ವಾಸ್ತು ಮಹತ್ವದ ಪಾತ್ರ ವಹಿಸುತ್ತದೆ. ವಾಸ್ತು ದೋಷವಿದ್ದಲ್ಲಿ ಮಾಡಿದ ಕೆಲಸ ಕೈಗೂಡುವುದಿಲ್ಲ. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವಂತಾಗುತ್ತದೆ.
ವಾಸ್ತು ಶಾಸ್ತ್ರದಲ್ಲಿಯೇ ವಾಸ್ತು ದೋಷ ನಿವಾರಣೆಗೆ ಕೆಲವೊಂದು ಉಪಾಯಗಳನ್ನು ಹೇಳಲಾಗಿದೆ. ಮನೆಯಲ್ಲಿ ನಾವು ಮಾಡುವ ಕೆಲವೊಂದು ತಪ್ಪುಗಳು ವಾಸ್ತುದೋಷಕ್ಕೆ ಕಾರಣವಾಗುತ್ತದೆ. ಹಾಗಾಗಿ ಅಪ್ಪಿತಪ್ಪಿಯೂ ಮನೆಯಲ್ಲಿ ಈ ತಪ್ಪುಗಳನ್ನು ಮಾಡಬಾರದು.
ವಾಸ್ತುಶಾಸ್ತ್ರದ ಪ್ರಕಾರ ದೇವರ ಮನೆ, ಮನೆಯ ಮಹತ್ವದ ಸ್ಥಳ. ಅಲ್ಲಿ ಎಂದೂ ಬೆಲೆ ಬಾಳುವ ಆಭರಣ ಹಾಗೂ ಹಣವನ್ನು ಇಡಬಾರದು. ಹಾಗೆ ಮುರಿದಿರುವ ದೇವರ ಮೂರ್ತಿಯನ್ನೂ ದೇವರ ಮನೆಯಲ್ಲಿ ಇಡಬಾರದು.
ವಾಸ್ತುಶಾಸ್ತ್ರದ ಪ್ರಕಾರ ಅಡುಗೆ ಮನೆಯಲ್ಲಿ ಎಂದೂ ಕನ್ನಡಿಯನ್ನಿಡಬಾರದು. ಅಡುಗೆ ಮನೆಯಲ್ಲಿಡುವ ಕನ್ನಡಿ ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ. ಜೊತೆಗೆ ಧನ ಹಾನಿಗೆ ಕಾರಣವಾಗುತ್ತದೆ.
ಬೆಳಿಗ್ಗೆ ಹಾಗೂ ಸಂಜೆ ಮನೆಯಲ್ಲಿ ಕರ್ಪೂರದ ಅಥವಾ ಧೂಪದ ಹೊಗೆಯನ್ನು ಮನೆಗೆ ತೋರಬೇಕು. ಇದ್ರಿಂದ ನಕಾರಾತ್ಮಕ ಶಕ್ತಿ ಪ್ರಭಾವ ಕಡಿಮೆಯಾಗಿ ವಾಸ್ತುದೋಷ ನಿವಾರಣೆಯಾಗುತ್ತದೆ.
ಮಲಗುವ ವೇಳೆ ಎಂದೂ ತಲೆ ಕೆಳಗೆ ಇಲೆಕ್ಟ್ರಿಕಲ್ ವಸ್ತುವನ್ನಿಟ್ಟು ಮಲಗಬಾರದು. ಹಾಗೆ ಹರಿದ ಹಾಸಿಗೆಯಲ್ಲಿ ಮಲಗಬಾರದು.