ಮುಖದ ಸೌಂದರ್ಯ ವೃದ್ಧಿಗೆ ಮಹಿಳೆಯರು ಬ್ಯೂಟಿ ಪಾರ್ಲರ್ ಮೊರೆ ಹೋಗ್ತಾರೆ. ಮುಖದ ಮೇಲಿನ ಕಲೆ, ಕೊಳಕು ಕಾಣದಂತೆ ಒಂದಿಷ್ಟು ಮೇಕಪ್ ಮಾಡಿಕೊಳ್ತಾರೆ. ಮೇಕಪ್ ಗಿಂತ ಮೊದಲು ಆಗಾಗ ಮುಖಕ್ಕೆ ಹಬೆ ತೆಗೆದುಕೊಳ್ಳುವುದ್ರಿಂದ ಸಾಕಷ್ಟು ಪ್ರಯೋಜನವಿದೆ.
ಮೊಡವೆಯಿಂದ ಬಳಲುವವರಿಗೆ ಹಬೆ ಉತ್ತಮ ಔಷಧಿ. ಚರ್ಮದೊಳಗಿನ ಎಣ್ಣೆಯುಕ್ತ ಗ್ರಂಥಿಯು ಕೊಳಕಿನಿಂದ ತುಂಬಿದಾಗ, ಗುಳ್ಳೆಗಳು ಹೆಚ್ಚಾಗಿ ಕಾಣುವ ಸಾಧ್ಯತೆಯಿರುತ್ತದೆ.
ತೈಲ ಗ್ರಂಥಿಯು ಸರಿಯಾಗಿ ಕೆಲಸ ಮಾಡಲು ಒಳಗಿರುವ ಕೊಳೆಯನ್ನು ತೆಗೆಯಬೇಕಾಗುತ್ತದೆ. ನಾಲ್ಕರಿಂದ ಐದು ನಿಮಿಷ ಹೊಗೆ ತೆಗೆದುಕೊಂಡಾಗ ಮೊಡವೆಯ ಕೊಳಕು ಸುಲಭವಾಗಿ ಹೊರಗೆ ಬರುತ್ತದೆ. ನಂತ್ರ ಐಸ್ಕ್ಯೂಬ್ ನಿಂದ ಮುಖಕ್ಕೆ ಮಸಾಜ್ ಮಾಡಿದ್ರೆ ಮೊಡವೆ ಕಲೆ ಇರುವುದಿಲ್ಲ.
ಬ್ಲ್ಯಾಕ್ ಹೆಡ್ ಮತ್ತು ವೈಟ್ ಹೆಡ್ ನಿಂದ ಬಳಲುವವರು ಕೂಡ ಈ ಉಪಾಯ ಅನುಸರಿಸಬಹುದು. ಮುಖವನ್ನು 5-10 ನಿಮಿಷಗಳ ಕಾಲ ಹಬೆಯಲ್ಲಿ ಇರಿಸಿ ಮತ್ತು ಸ್ಕ್ರಬ್ಬರ್‌ನಿಂದ ಮುಖದ ಬ್ಲ್ಯಾಕ್ ಹೆಡ್ ಮತ್ತು ವೈಟ್ ಹೆಡ್ ಸ್ವಚ್ಛಗೊಳಿಸಿ. ಮುಖ ಮೃದುವಾಗಿ ಬ್ಲ್ಯಾಕ್ ಹೆಡ್ ಕಡಿಮೆಯಾಗುತ್ತದೆ.
ಹಬೆಯಿಂದ ಮುಖದ ಚರ್ಮ ಸ್ವಚ್ಛಗೊಳ್ಳುತ್ತದೆ. ಚರ್ಮದ ಮೇಲಿನ ಕೊಳೆಯನ್ನು ತೆಗೆದುಹಾಕಿ ಮುಖಗಟ್ಟದ ರಂದ್ರಕ್ಕೆ ಉಸಿರಾಡಲು ಸಹಾಯ ಮಾಡುತ್ತದೆ. ಚರ್ಮವನ್ನು ಧೂಳಿನಿಂದ ರಕ್ಷಿಸುತ್ತದೆ.
ಮುಖಕ್ಕೆ ಹಬೆ ತೆಗೆದುಕೊಂಡಾಗ ಮುಖ ತೇವಗೊಳ್ಳುತ್ತದೆ. ಶುಷ್ಕ ಚರ್ಮದ ಸಮಸ್ಯೆಯಿಂದ ಮುಕ್ತಿಸಿಗುತ್ತದೆ. ಚರ್ಮದ ಸುಕ್ಕುಗಟ್ಟಿದ ಸಮಸ್ಯೆ ಕಡಿಮೆಯಾಗುತ್ತದೆ. ಇದ್ರಿಂದ ನಿಮ್ಮ ಸೌಂದರ್ಯ ವೃದ್ಧಿಸುತ್ತದೆ. ವಯಸ್ಸು ಕಡಿಮೆಯಾದಂತೆ ಕಾಣುತ್ತದೆ.