ಈ ಬಾರಿ ಮಾ. 8 ರಂದು ಮಹಾಶಿವರಾತ್ರಿ ಆಚರಣೆ ಮಾಡಲಾಗ್ತಿದೆ. ಶಿವ ಭಕ್ತರಿಗೆ ವಿಶೇಷವಾದ ದಿನವಿದು. ಶಿವ ಭಕ್ತರು ದೇವಸ್ಥಾನಗಳಿಗೆ ತೆರಳಿ ಶಿವನ ಆರಾಧನೆಯಲ್ಲಿ ನಿರತರಾಗ್ತಾರೆ. ಶಿವ ಪೂಜೆ, ಆರಾಧನೆ ಜೊತೆ ಈ ಮೂರು ಕೆಲಸಗಳನ್ನು ಶಿವರಾತ್ರಿ ದಿನ ಮಾಡಿದ್ರೆ ಈಶ್ವರ ಬಹುಬೇಗ ಭಕ್ತರಿಗೆ ಒಲಿಯುತ್ತಾನೆ. ಶೀಘ್ರವೇ ನಿಮ್ಮ ಆಸೆ ಈಡೇರಲಿದೆ.
ನಿಮ್ಮೆಲ್ಲ ಆಸೆ ಈಡೇರಬೇಕೆಂದ್ರೆ ಮಹಾಶಿವರಾತ್ರಿ ದಿನ ಶಿವನ ಪೂಜೆ ಜೊತೆ ಓಂ ಮಹಾಶಿವಾಯ ಸೋಮಾಯ ನಮಃ ಮಂತ್ರವನ್ನು ಜಪಿಸಿ. ನೀವು ಶಿವನ ಪೂಜೆ ವೇಳೆ ಈ ಮಂತ್ರ ಜಪಿಸಿದ್ರೆ ಮನೆಯಲ್ಲಿ ಗಲಾಟೆ ಶಮನವಾಗಿ ಶಾಂತಿ ನೆಲೆಸುತ್ತದೆ. ಇದ್ರ ಜೊತೆಗೆ ಶಿವರಾತ್ರಿ ದಿನ ಶಿವಲಿಂಗಕ್ಕೆ ಆಕಳ ಹಾಲನ್ನು ಅರ್ಪಿಸಿದ್ರೆ ಜಗಳ, ಗಲಾಟೆ ಕಡಿಮೆಯಾಗುತ್ತದೆ.
ಕೆಲಸದ ಸಮಸ್ಯೆಯಿಂದ ಬಳಲುತ್ತಿರುವವರು ಹಾಗೂ ಕೆಲಸದಲ್ಲಿ ಉನ್ನತಿ ಬಯಸುತ್ತಿರುವವರು ಶಿವರಾತ್ರಿ ದಿನ ಈಶ್ವರನಿಗೆ ಜೇನುತುಪ್ಪವನ್ನು ಅವಶ್ಯವಾಗಿ ಅರ್ಪಿಸಿ. ನೌಕರಿಯಲ್ಲಿ ಬರುವ ಅಡತಡೆ ದೂರವಾಗಿ ಲಾಭ ಪ್ರಾಪ್ತಿಯಾಗಲಿದೆ.
ಕೌಟುಂಬಿಕ ಸಮಸ್ಯೆಯಿಂದ ಹೊರ ಬಂದು ಆರ್ಥಿಕ ವೃದ್ಧಿ ಬಯಸಿದ್ದರೆ ಶಿವರಾತ್ರಿ ದಿನ ಶಿವನಿಗೆ ಕೆಂಪು ಚಂದನವನ್ನು ಅರ್ಪಿಸಿ. ಹೀಗೆ ಮಾಡಿದ್ರೆ ಯಶಸ್ಸು ಪ್ರಾಪ್ತಿಯಾಗಲಿದೆ. ವೈವಾಹಿಕ ಜೀವನ ಸುಖಕರವಾಗಿರಲಿದ್ದು, ಆರ್ಥಿಕ ವೃದ್ಧಿಯಾಗಲಿದೆ.