ಉದ್ದನೆಯ ಕೂದಲು ನಿಮ್ಮ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತದೆ. ಹಾಗಾಗಿ ಎಲ್ಲರೂ ಉದ್ದನೆಯ ಕೂದಲನ್ನು ಪಡೆಯಲು ಬಯಸುತ್ತಾರೆ. ಆದರೆ ಅಸಮರ್ಪಕ ಪೋಷಣೆ ಮತ್ತು ಹಾನಿಯಿಂದಾಗಿ ಕೂದಲಿನ ಬೆಳವಣಿಗೆಗೆ ಅಡ್ಡಿಯಾಗುತ್ತದೆ. ಹಾಗಾಗಿ ಉದ್ದನೆ ಯ ಕೂದಲನ್ನು ಪಡೆಯಲು ಈ ನಿಯಮ ಪಾಲಿಸಿ.
*ವಾತಾವರಣದ ಕೊಳಕು, ಧೂಳು, ಮತ್ತು ಸೂರ್ಯನ ಬಿಸಿಲಿನಿಂದ ಕೂದಲಿನ ತುದಿ ಹಾನಿಗೊಳಗಾಗುತ್ತದೆ. ಇದು ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ. ಹಾಗಾಗಿ ಕೂದಲಿನ ತುದಿಯನ್ನು ಆಗಾಗ ಕತ್ತರಿಸುತ್ತಿರಿ.
*ಕೂದಲಿನ ಬುಡ ಹಾಗೂ ತುದಿಯನ್ನು ಚೆನ್ನಾಗಿ ಪೋಷಣೆ ಮಾಡಬೇಕು. ಇದರಿಂದ ಕೂದಲು ಉದ್ದವಾಗಿ ಬೆಳೆಸಬಹುದು. ಹಾಗಾಗಿ ಪ್ರತಿಬಾರಿ ಕೂದಲಿಗೆ ಕಂಡೀಷನರ್ ಬಳಸಿ. ಇದು ಕೂದಲಿಗೆ ರಕ್ಷಣೆಯನ್ನು ನೀಡಿ ಹಾನಿಗೊಳಗಾಗುವುದನ್ನು ತಡೆಯುತ್ತದೆ. ಕೂದಲಿನ ಆರೋಗ್ಯ ಕಾಪಾಡಿ ವೇಗವಾಗಿ ಬೆಳೆಯುವಂತೆ ಮಾಡುತ್ತದೆ.
*ಪ್ರತಿವಾರ ನಿಮ್ಮ ಕೂದಲಿಗೆ ಬೆಚ್ಚಗಿರುವ ಎಣ್ಣೆಯಿಂದ ಮಸಾಜ್ ಮಾಡಿ. ಇದರಿಂದ ನೆತ್ತಿಯು ಆರೋಗ್ಯವಾಗಿ ಕೂದಲು ಬೆಳೆಯಲು ಸಹಾಯ ಮಾಡುತ್ತದೆ. ತೆಂಗಿನೆಣ್ಣೆ, ಆಲಿವ್ ಅಥವಾ ಹರಳೆಣ್ಣೆ, ಬಾದಾಮಿ ಎಣ್ಣೆಗಳನ್ನು ಬಳಸಬಹುದು.