ಹಣ ಸಂಪಾದಿಸಲು ಎಲ್ಲರೂ ಬಯಸ್ತಾರೆ. ಹಗಲು-ರಾತ್ರಿ ಇದಕ್ಕಾಗಿ ಕಷ್ಟಪಡ್ತಾರೆ. ಕೆಲವರು ಹಣವನ್ನು ಕೂಡಿ ಹಾಕ್ತಾರೆಯೇ ಹೊರತು ಅದ್ರ ಸದುಪಯೋಗ ಮಾಡುವುದಿಲ್ಲ. ಇದ್ರಿಂದ ಸಂಪಾದಿಸಿದ ಹಣ ಕೈತಪ್ಪಿ ಹೋಗುವ ಸಾಧ್ಯತೆಯಿರುತ್ತದೆ. ಹಣ ಸದಾ ಕೈನಲ್ಲಿರಬೇಕೆಂದ್ರೆ ಕೆಲವೊಂದು ಕೆಲಸಗಳನ್ನು ಅವಶ್ಯವಾಗಿ ಮಾಡಬೇಕಾಗುತ್ತದೆ.
ಹಣ ಗಳಿಸಿದ ನಂತ್ರ ಮೊದಲು ಸ್ವಲ್ಪ ಹಣವನ್ನು ದಾನಕ್ಕೆ ತೆಗೆದಿಡಬೇಕು. ಪುರಾಣದಲ್ಲಿ ದಾನದಿಂದ ಲಭಿಸುವ ಪುಣ್ಯದ ಬಗ್ಗೆ ಹೇಳಲಾಗಿದೆ. ಗಳಿಸಿದ ಹಣದಲ್ಲಿ ಸ್ವಲ್ಪ ಭಾಗವನ್ನು ದಾನ ಮಾಡಿದ್ರೆ ಮತ್ತಷ್ಟು ಹಣ ಜೇಬು ಸೇರುತ್ತದೆ. ದಾನ ಮಾಡುವಾಗ ಅಹಂಕಾರ ತೋರಿಸಬಾರದು.
ಹಣ ಗಳಿಸಿದ ನಂತ್ರ ಮಾಡಬೇಕಾದ ಎರಡನೇ ಕೆಲಸ ಸದುಪಯೋಗ. ಸಂಪಾದಿಸಿದ ಹಣದಲ್ಲಿ ಕೆಲ ಭಾಗವನ್ನು ಸ್ವಂತಕ್ಕೆ ಹಾಗೂ ಕುಟುಂಬಸ್ಥರ ಸಂತೋಷಕ್ಕಾಗಿ ಖರ್ಚು ಮಾಡಬೇಕು.
ಹಣವನ್ನು ಸದುಪಯೋಗ ಮಾಡದೆ ಕೂಡಿಡುತ್ತ ಹೋದ್ರೆ ಅದೊಂದು ಚಟವಾಗುತ್ತದೆ. ಮನುಷ್ಯ ಎಷ್ಟು ಕೂಡಿಟ್ಟರೂ ತೃಪ್ತನಾಗುವುದಿಲ್ಲ. ಸತ್ತ ಮೇಲೆ ಹಣ ಬೇರೆಯವರ ಪಾಲಾಗುತ್ತದೆ. ಹಾಗಾಗಿ ಅವಶ್ಯಕತೆಯಿರುವಷ್ಟು ಹಣವನ್ನು ಮಾತ್ರ ಸಂಪಾದನೆ ಮಾಡಬೇಕು. ಕೂಡಿಡಲು ಹಣ ಸಂಪಾದನೆ ಮಾಡಬಾರದು ಎನ್ನುತ್ತದೆ ಶಾಸ್ತ್ರ.