ಭಾರತದಲ್ಲಿ ಅಕ್ಕಿಯ ಬಳಕೆ ಅತಿ ಹೆಚ್ಚು. ಆಹಾರಕ್ಕೆ ಮಾತ್ರವಲ್ಲ ಪೂಜೆಗಳಿಗೂ ಅಕ್ಕಿ ಕಾಳಿನ ಬಳಕೆ ಮಾಡ್ತಾರೆ. ಈ ಅಕ್ಕಿ ಕಾಳು ತುಂಡಾಗಿರಬಾರದು. ಕತ್ತರಿಸಲ್ಪಟ್ಟ ಅಕ್ಕಿ ಕಾಳುಗಳನ್ನು ದೇವರಿಗೆ ಅರ್ಪಿಸುವುದು ಶುಭವಲ್ಲ. ಕತ್ತರಿಸಿದ ಅಕ್ಕಿಕಾಳನ್ನು ದೇವರಿಗೆ ಅರ್ಪಿಸಿದ್ರೆ ಭಗವಂತ ಕೋಪಗೊಳ್ತಾನೆ. ಪೂಜೆ ಫಲ ಪ್ರಾಪ್ತಿಯಾಗುವುದಿಲ್ಲ.
ದೇವರ ಪೂಜೆಗೆ ಬಳಸುವ ಅಕ್ಕಿ ಕಾಳು ಬೆಳ್ಳಗಿರಬೇಕು. ಅಪ್ಪಿತಪ್ಪಿಯೂ ಅದ್ರ ಬಣ್ಣ ಬದಲಾಗಿರಬಾರದು. ಅಕ್ಕಿಯಲ್ಲಿ ಧೂಳಿರಬಾರದು. ಕಸವಿರಬಾರದು. ಪ್ರತಿ ದಿನ ಪೂಜೆ ವೇಳೆ ದೇವರಿಗೆ ಅಕ್ಕಿಯನ್ನು ಅರ್ಪಿಸಿ. ಹೀಗೆ ಮಾಡಿದ್ರೆ ಎಂದೂ ಮನೆಯಲ್ಲಿ ಧಾನ್ಯದ ಕೊರತೆ ಎದುರಾಗುವುದಿಲ್ಲ. ಪ್ರತಿ ದಿನ ಬೆಳಿಗ್ಗೆ ನಾಲ್ಕು ಅಕ್ಕಿ ಕಾಳನ್ನು ದೇವರಿಗೆ ಅರ್ಪಿಸಿ. ದೇವಸ್ಥಾನದಲ್ಲಿ ದೇವರಿಗೆ ಅರ್ಪಿಸಿದ ಅಕ್ಕಿ ಕಾಳನ್ನು ಹಕ್ಕಿಗಳಿಗೆ ನೀಡಿ.
ದೇವರಿಗೆ ಅರ್ಪಿಸುವ ಅಕ್ಕಿಯನ್ನು ಸದಾ ಬೇರೆಯಾಗಿಡಬೇಕು. ಅದನ್ನು ಎಂದೂ ಊಟಕ್ಕೆ ಬಳಸುವ ಅಕ್ಕಿ ಜೊತೆಗಿಡಬಾರದು. ಶಿವಲಿಂಗಕ್ಕೆ ಪೂಜೆ ಮಾಡುವ ವೇಳೆ ಅವಶ್ಯವಾಗಿ ಅಕ್ಕಿಯನ್ನು ಅರ್ಪಿಸಿ. ಈ ವೇಳೆ ‘ಓಂ ನಮಃ ಶಿವಾಯ’ ಮಂತ್ರವನ್ನು ಜಪಿಸಬೇಕು.