alex Certify ಜೋತು ಬಿದ್ದಿರುವ ಹೊಟ್ಟೆಯ ಚರ್ಮ ಟೈಟ್ ಆಗಬೇಕೆಂದರೆ ಹೀಗೆ ಮಾಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜೋತು ಬಿದ್ದಿರುವ ಹೊಟ್ಟೆಯ ಚರ್ಮ ಟೈಟ್ ಆಗಬೇಕೆಂದರೆ ಹೀಗೆ ಮಾಡಿ

ಗಭಾವಸ್ಥೆಯಲ್ಲಿ ನಿಮ್ಮ ಹೊಟ್ಟೆಯ ಭಾಗ ವಿಸ್ತರಿಸುತ್ತದೆ. ಆ ವೇಳೆ ನಿಮ್ಮ ಹೊಟ್ಟೆಯ ಚರ್ಮ ಕೂಡ ವಿಸ್ತರಿಸುತ್ತದೆ. ಹೆರಿಗೆಯ ಬಳಿಕ ಅದು ಜೋತು ಬೀಳುತ್ತದೆ.  ಈ ಚರ್ಮವನ್ನು ಮತ್ತೆ ಟೈಟ್ ಆಗಿಸಲು ಈ ಮನೆ ಮದ್ದನ್ನು ಬಳಸಿ.

*ಅಲೋವೆರಾ ಜೆಲ್ ಚರ್ಮವನ್ನು ಟೈಟ್ ಆಗಿಸುತ್ತದೆ. ಜೇನುತುಪ್ಪ ವಯಸ್ಸಾದ ಲಕ್ಷಣಗಳನ್ನು ನಿವಾರಿಸುತ್ತದೆ, ಹಾಗಾಗಿ ಅಲೋವೆರಾ ಜೆಲ್, ನಿಂಬೆ ರಸ, ಮತ್ತು ಜೇನುತುಪ್ಪ ಮೂರನ್ನು ಒಂದೊಂದು ಚಮಚದಷ್ಟು ತೆಗೆದುಕೊಂಡು 2 ಚಮಚ ಶುಂಠಿಯ ಪುಡಿಗೆ ಸೇರಿಸಿ ಮಿಶ್ರಣ ಮಾಡಿ ಹೊಟ್ಟೆಯ ಮೇಲೆ ಹಚ್ಚಿ. 20 ನಿಮಿಷ ಬಿಟ್ಟು ವಾಶ್ ಮಾಡಿ. ಇದು ಚರ್ಮವನ್ನು ಟೈಟ್ ಆಗಲು ಸಹಕರಿಸುತ್ತದೆ.

 *ಮೊಟ್ಟೆಯ ಬಿಳಿಭಾಗ, 2 ಚಮಚ ಸಮುದ್ರದ ಉಪ್ಪು, ½ ಚಮಚ ನಿಂಬೆ ರಸ ಬೆರೆಸಿ ಸ್ನಾನ ಮಾಡುವ ಮುನ್ನ ನಿಮ್ಮ ಹೊಟ್ಟೆಯ ಮೇಲೆ ಮಸಾಜ್ ಮಾಡಿ. ಮೊಟ್ಟೆ ಚರ್ಮವನ್ನು ಬಿಗಿಗೊಳಿಸುತ್ತದೆ. ಉಪ್ಪು ಸತ್ತಕೋಶಗಳನ್ನು ತೆಗೆದು ಹಾಕುತ್ತದೆ. ಇದರಿಂದ ಚರ್ಮ ಮೊದಲಿನಂತಾಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...