ಪಿತೃ ಪಕ್ಷದಲ್ಲಿ ಪೂರ್ವಜರು ಭೂಮಿಗೆ ಬರ್ತಾರೆಂಬ ನಂಬಿಕೆಯಿದೆ. ಅವರ ಕೃಪೆ ಹಾಗೂ ಆಶೀರ್ವಾದ ಪಡೆಯಲು ಶ್ರಾದ್ಧ ಮಾಡಲಾಗುತ್ತದೆ.
ಪಿತೃ ಪಕ್ಷದಲ್ಲಿ ಪಕ್ಷಿ – ಪ್ರಾಣಿಗಳಿಗೆ ವಿಶೇಷ ಮಹತ್ವವಿದೆ. ಪಶು – ಪಕ್ಷಿ ರೂಪದಲ್ಲಿ ಪೂರ್ವಜರು ಮನೆಗೆ ಬರ್ತಾರೆಂದು ನಂಬಲಾಗಿದೆ. ಶ್ರಾದ್ಧದಂದು ತಿನ್ನುವ ಆಹಾರದಲ್ಲಿ ಒಂದು ಭಾಗವನ್ನು ಕಾಗೆಗೆ ನೀಡಬೇಕು.
ಹಿಂದೂ ಧರ್ಮದಲ್ಲಿ ಆಕಳನ್ನು ದೇವರೆಂದು ಪೂಜಿಸಲಾಗುತ್ತದೆ. ಪಿತೃ ಪಕ್ಷದಲ್ಲಿ ಕೂಡ ಹಸುಗಳಿಗೆ ವಿಶೇಷ ಗಮನ ನೀಡಬೇಕು. ಮನೆಯಲ್ಲಿ ಮಾಡಿದ ಮೊದಲ ಆಹಾರವನ್ನು ಹಸುವಿಗೆ ನೀಡಬೇಕು. ಹಸುಗಳ ಸೇವೆ ಮಾಡಿದ್ರೆ ಪೂರ್ವಜರು ಪ್ರಸನ್ನರಾಗ್ತಾರೆ.
ಕಾಗೆ – ಹಸುವಿನ ಜೊತೆಗೆ ನಾಯಿಯನ್ನು ಮರೆಯಬೇಡಿ. ಪಿತೃ ಪಕ್ಷದಲ್ಲಿ ನಾಯಿಗಳಿಗೆ ಒಂದು ಭಾಗವನ್ನು ನೀಡಬೇಕು.
ದೇವಸ್ಥಾನದ ಬಳಿ ಇರುವ ಭಿಕ್ಷುಕನೊಬ್ಬನಿಗೆ ಊಟ ಬಡಿಸಿ ಜೊತೆಗೆ ಬ್ರಾಹ್ಮಣರಿಗೆ ದಾನ ಮಾಡುವುದನ್ನು ಮರೆಯಬೇಡಿ.