ಮೈಗ್ರೇನ್ ಸಮಸ್ಯೆ ಒಮ್ಮೆ ಕಾಣಿಸಿಕೊಂಡರೆ ನಿಮ್ಮ ದಿನವಿಡೀ ಹಾಳು. ಈ ಅರ್ಧ ತಲೆನೋವಿಗೆ ಪ್ರತಿಬಾರಿ ಮಾತ್ರೆ ತಿನ್ನುವ ಬದಲು ನಿತ್ಯ ಕೆಲವು ಚಟುವಟಿಕೆಗಳನ್ನು ಮಾಡುವ ಮೂಲಕ ತಲೆನೋವು ಬರದಂತೆಯೂ ನೋಡಿಕೊಳ್ಳಬಹುದು.
ಬೆಳಗ್ಗೆ ಬೇಗ ಎದ್ದು ಕನಿಷ್ಠ 20 ನಿಮಿಷ ಯೋಗ ಮಾಡಿ. ಇದರಿಂದ ದಿನಪೂರ್ತಿ ಉಲ್ಲಾಸಭರಿತರಾಗಿ ಇರುವುದು ಮಾತ್ರವಲ್ಲ, ತಲೆನೋವಿನ ಸಮಸ್ಯೆಯೂ ನಿಮ್ಮ ಹತ್ತಿರ ಸುಳಿಯುವುದಿಲ್ಲ.
ನಿತ್ಯ ತಲೆ ನೋಯುತ್ತಿದ್ದರೆ ದೇಸಿ ಹಸುವಿನ ತುಪ್ಪವನ್ನು ಮೂಗಿನ ಹೊಳ್ಳೆಗಳಿಗೆ ಬಿಟ್ಟುಕೊಳ್ಳಿ. ನಿತ್ಯ ಮೂಗಿಗೆ ಎರಡು ಹನಿ ತುಪ್ಪ ಹಾಕಿಕೊಂಡರೆ ಅನಗತ್ಯವಾಗಿ ಸೀನುವುದು, ಅಲರ್ಜಿಯಾಗುವುದು ಹಾಗೂ ತಲೆನೋವಿನ ಸಮಸ್ಯೆ ಕಡಿಮೆಯಾಗುತ್ತದೆ.
ದಿನಕ್ಕೆ ಮೂರರಿಂದ ನಾಲ್ಕು ಲೀಟರ್ ನಷ್ಟು ನೀರು ಕುಡಿಯುವುದರಿಂದ, ಏಳರಿಂದ ಎಂಟು ಗಂಟೆ ಹೊತ್ತು ನಿದ್ದೆ ಮಾಡುವುದರಿಂದ ತಲೆನೋವು ಕಡಿಮೆಯಾಗುತ್ತದೆ. ಈ ಸಮಸ್ಯೆ ಇರುವವರು ಸಮಯಕ್ಕೆ ಸರಿಯಾಗಿ ಊಟ ಮಾಡುವುದು ಬಹಳ ಮುಖ್ಯ.