ಆಧುನಿಕ ಜೀವನಶೈಲಿ, ಒತ್ತಡದ ಜೀವನದಿಂದಾಗಿ ಚಿಕ್ಕ ವಯಸ್ಸಿನವರಲ್ಲೇ ಹೃದಯ ಸಂಬಂಧಿ ಕಾಯಿಲೆ ಆವರಿಸಿಕೊಂಡು ಬಿಡುತ್ತವೆ. ಕುಳಿತು ಮಾಡುವ ಕೆಲಸಗಳಿಂದಾಗಿ ದೈಹಿಕ ಶ್ರಮ ಇರುವುದಿಲ್ಲವಾದ್ದರಿಂದ ಬೊಜ್ಜು ಬೆಳೆಯುವ ಸಾಧ್ಯತೆ ಹೆಚ್ಚಿರುತ್ತದೆ.
ಅವಶ್ಯಕತೆಗಿಂತ ಕಡಿಮೆ ನಿದ್ದೆ ಮಾಡುವವರಲ್ಲಿ ಹೃದಯ ಸಂಬಂಧಿ ಕಾಯಿಲೆ ಕಾಣಿಸಿಕೊಳ್ಳಬಹುದಾಗಿದೆ. ಸರಿಯಾಗಿ ನಿದ್ದೆ ಮಾಡದಿದ್ದರೆ, ಹೃದಯದ ಕಾಯಿಲೆ ಬರಬಹುದೆಂದು ಅಧ್ಯಯನದಲ್ಲಿ ಬೆಳಕಿಗೆ ಬಂದಿದೆ. ಅದರಲ್ಲಿಯೂ ನೈಟ್ ಡ್ಯೂಟಿ ಮಾಡುವವರಲ್ಲಿ ಹೃದಯ ಸಂಬಂಧಿ ಕಾಯಿಲೆ ಹೆಚ್ಚಾಗಿರುತ್ತದೆ ಎನ್ನಲಾಗಿದೆ.
ಸರಿಯಾಗಿ ನಿದ್ದೆ ಮಾಡದವರಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ಬರಬಹುದಾದ ಸಾಧ್ಯತೆ ಕಂಡು ಬಂದಿದೆ ಎಂದು ಹೇಳಲಾಗಿದೆ. ಹಾಗಾಗಿ ನಿದ್ರೆ ಮಾನವರಿಗೆ ಅತಿ ಅವಶ್ಯಕ ಎಂದು ಹೇಳಲಾಗಿದೆ.