ಈ ಆಧುನಿಕ ಯುಗದಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ದೊಡ್ಡ ಸವಾಲು. ಅದರಲ್ಲೂ ಕೂದಲು ಉದುರದಂತೆ ರಕ್ಷಿಸುವುದಂತೂ ಅಸಾಧ್ಯ ಎನಿಸಿದೆ. ಕಾರಣ ಕಲುಷಿತ ವಾತಾವರಣ, ರಾಸಾಯನಿಕ ಬೆರೆತ ಆಹಾರ ಮತ್ತು ನಮ್ಮ ಜಡ ಜೀವನಶೈಲಿ. ಕೂದಲಿನ ಆರೋಗ್ಯವನ್ನು ನಿರ್ಲಕ್ಷಿಸಿದ್ರೆ ಉದುರುವಿಕೆ ಹೆಚ್ಚಾಗಬಹುದು. ಹಾಗಾಗಿ ಕೆಲವೊಂದು ನಿರ್ದಿಷ್ಟ ಪದಾರ್ಥಗಳನ್ನು ಬಳಸುವ ಮೂಲಕ ಕೂದಲನ್ನು ಕಾಪಾಡಿಕೊಳ್ಳಬೇಕು.
ಬೀಟ್ರೂಟ್: ಬೀಟ್ರೂಟ್ ಅನೇಕ ಪೋಷಕಾಂಶಗಳನ್ನು ಹೊಂದಿದೆ. ಇದು ಕೂದಲು ಉದುರುವಿಕೆಯನ್ನು ತಡೆಯುತ್ತದೆ.
ಗ್ರೀನ್ ಟೀ: ಗ್ರೀನ್ ಟೀ ಆರೋಗ್ಯಕ್ಕೆ ಮಾತ್ರವಲ್ಲದೆ ಕೂದಲಿಗೆ ಕೂಡ ಒಳ್ಳೆಯದು. ನಿಯಮಿತವಾಗಿ ಗ್ರೀನ್ ಟೀ ಕುಡಿಯುವುದರಿಂದ ಕೂದಲು ಉದುರುವುದಿಲ್ಲ.
ನೆಲ್ಲಿಕಾಯಿ: ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಹೇರಳವಾಗಿರುತ್ತದೆ. ಇದು ಕೂದಲು ಉದುರುವಿಕೆಯನ್ನು ನಿಲ್ಲಿಸುತ್ತದೆ ಜೊತೆಗೆ ಕೂದಲಿಗೆ ಹೊಳಪನ್ನು ನೀಡುತ್ತದೆ.
ಪಾಲಕ್ ಸೊಪ್ಪು: ಪಾಲಕ್ ಸೊಪ್ಪು ನೆತ್ತಿಯನ್ನು ಆರೋಗ್ಯಕರವಾಗಿರಿಸುತ್ತದೆ. ಕೂದಲಿಗೆ ಕಂಡೀಷನರ್ನಂತೆ ಕಾರ್ಯನಿರ್ವಹಿಸುತ್ತದೆ. ಪಾಲಕ್ ಸೊಪ್ಪನ್ನು ನಿಯಮಿತವಾಗಿ ಸೇವನೆ ಮಾಡಬೇಕು.
ಕ್ಯಾರೆಟ್ : ವಿಟಮಿನ್ ಎ ಸಮೃದ್ಧವಾಗಿರುವ ಕ್ಯಾರೆಟ್ ತಿನ್ನುವುದರಿಂದ ಕೂದಲು ಉದುರುವುದನ್ನು ನಿಯಂತ್ರಿಸಬಹುದು.
ಈರುಳ್ಳಿ: ಈರುಳ್ಳಿಯಲ್ಲಿರುವ ಸಲ್ಫರ್ ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ. ಇದರಿಂದಾಗಿ ಕೂದಲಿನ ಕಿರುಚೀಲಗಳು ಬಲಗೊಳ್ಳುತ್ತವೆ.
ಅಲೋವೆರಾ: ತಾಜಾ ಅಲೋವೆರಾದ ಸೇವನೆ ಹಾಗೂ ಲೇಪಿಸುವಿಕೆಯ ಮೂಲಕ ಕೂದಲು ಉದುರುವಿಕೆಯನ್ನು ತಡೆಗಟ್ಟಬಹುದು.
ಹಾಲಿನ ಉತ್ಪನ್ನಗಳು : ದಿನನಿತ್ಯದ ಆಹಾರದಲ್ಲಿ ಡೈರಿ ಉತ್ಪನ್ನಗಳನ್ನು ಸೇರಿಸಲು ಮರೆಯದಿರಿ. ಅವು ಪ್ರೋಟೀನ್ನಲ್ಲಿ ಸಮೃದ್ಧವಾಗಿರುತ್ತವೆ. ಹಾಗಾಗಿ ಕೂದಲಿಗೆ ಪ್ರಯೋಜನಕಾರಿ.
ವಾಲ್ನಟ್: ವಾಲ್ನಟ್ ಕೂದಲು ಉದುರುವಿಕೆಯನ್ನು ನಿಯಂತ್ರಿಸುತ್ತದೆ. ವಿಟಮಿನ್-ಬಿ, ವಿಟಮಿನ್-ಇ, ಪ್ರೊಟೀನ್ ಮತ್ತು ಮೆಗ್ನೀಸಿಯಮ್ ಇದರಲ್ಲಿ ಹೇರಳವಾಗಿದೆ.