ಸದಾ ಒತ್ತಡದಲ್ಲಿ ಕೆಲಸ ಮಾಡುವುದರಿಂದ ಬಳಲಿದಂತಾಗುತ್ತದೆ. ಕೆಲಸದ ನಡುವೆ ಕೊಂಚ ವಿರಾಮ ಅವಶ್ಯಕ. ಬಿಡುವಿನ ಬಳಿಕ ಹೊಸ ಉತ್ಸಾಹದೊಂದಿಗೆ ಕೆಲಸ ಮಾಡಬಹುದಾಗಿದೆ.
ಇನ್ನು ನಾವು ಮಾಡಬೇಕಿರುವ ಕೆಲಸದ ಬಗ್ಗೆ ಸ್ವಲ್ಪವಾದರೂ ತಿಳಿದಿರಬೇಕು. ಗೊತ್ತಿಲ್ಲದ ಕೆಲಸವನ್ನು ಆರಂಭಿಸುವಾಗ ಗೊತ್ತಿದ್ದವರಿಂದ ಮಾಹಿತಿ ಪಡೆದುಕೊಂಡರೆ ಅನುಕೂಲವಾಗುತ್ತದೆ.
ಯಾವುದೇ ಕೆಲಸವಿರಲಿ, ಇದು ನನ್ನಿಂದಾಗದು ಎಂದು ಭಾವಿಸದೇ ಹಿಡಿದ ಕಾರ್ಯವನ್ನು ಸಾಧಿಸುವೆ ಎನ್ನುವ ಛಲದೊಂದಿಗೆ ಮುನ್ನುಗ್ಗುವುದನ್ನು ಕಲಿಯಿರಿ.
ನಿಮ್ಮ ಕೆಲಸ ಉತ್ತಮ ಆರಂಭ ಕಂಡರೆ, ಅರ್ಧ ಕಾರ್ಯ ಮುಗಿದಂತೆಯೇ. ಅಲ್ಲದೇ, ಪೂರ್ಣ ಯೋಜನೆಯೊಂದಿಗೆ ಇಷ್ಟೇ ಅವಧಿಯಲ್ಲಿ ಮುಗಿಸಬೇಕೆಂದು ಕೆಲಸವನ್ನು ಆರಂಭಿಸಿ. ಅದು ಸುಲಭವಾಗುತ್ತಾ ಹೋಗುತ್ತದೆ.
ಛಲದಿಂದ ಮುನ್ನುಗ್ಗಿದಾಗ ಯಾವುದೂ ಅಸಾಧ್ಯವೆನಿಸುವುದಿಲ್ಲ. ಕೆಲಸದಲ್ಲಿ ಶ್ರದ್ಧೆ, ಪರಿಶ್ರಮ ಅವಶ್ಯಕ. ಅಡ್ಡಮಾರ್ಗಗಳಿಂದ ತಕ್ಷಣಕ್ಕೆ ಗುರಿ ತಲುಪಿದರೂ ಅದರ ಫಲ ಹೆಚ್ಚು ದಿನ ಉಳಿಯುವ ಸಾಧ್ಯತೆ ಕಡಿಮೆ ಇರುತ್ತದೆ. ಒಳ್ಳೆಯ ಮಾರ್ಗದಲ್ಲಿ, ಮಾರ್ಗದರ್ಶನದಲ್ಲಿ ಸಾಗುವುದರಿಂದ ನಿಮ್ಮ ಕೆಲಸಕ್ಕೆ ಬೆಲೆ ಇರುತ್ತದೆ. ಕೆಲಸವೂ ಸುಲಭವಾಗುತ್ತದೆ.