ದೇಹಕ್ಕೆ ಹಲವು ರೀತಿಯ ಪ್ರಯೋಜನಗಳನ್ನು ನೀಡುವ ತುಪ್ಪವನ್ನು ದೀರ್ಘ ಕಾಲ ಸಂಗ್ರಹಿಸಿಡುವ ಕೆಲವು ಟಿಪ್ಸ್ ಗಳು ಇಲ್ಲಿವೆ ಕೇಳಿ.
ತಂಪಾದ ಜಾಗದಲ್ಲಿ ತುಪ್ಪವನ್ನು ತೆಗೆದಿಡಿ. ಹೆಚ್ಚು ಗಾಳಿಯಾಡದಂತೆ ಬಿಗಿಯಾಗಿ ಮುಚ್ಚಿ. ವಿಪರೀತ ಸೆಖೆ ಇದ್ದರೆ ತುಪ್ಪವನ್ನು ಫ್ರಿಜ್ ನಲ್ಲಿಡಿ. ಇದರಿಂದ ಮೂರು ತಿಂಗಳ ತನಕ ಹಾಳಾಗದೆ ಉಳಿಯುತ್ತದೆ.
ಗಾಳಿಯಾಡದ ಏರ್ ಟೈಟ್ ಕಂಟೈನರ್ ಬಳಸಿ. ತುಪ್ಪದಲ್ಲಿ ತೇವಾಂಶ ಸೇರಿಕೊಂಡರೆ ಅದು ಗುಣಮಟ್ಟ ಕಳೆದುಕೊಳ್ಳುತ್ತದೆ. ರುಚಿ ಬದಲಾಗಿ ಸೇವನೆಗೆ ಯೋಗ್ಯವಾಗಿ ಉಳಿಯದೆ ಹೋಗಬಹುದು. ಪದೇ ಪದೇ ಮುಚ್ಚಳ ತೆಗೆದು ಹಾಕುತ್ತಿದ್ದರೂ ಅದು ಬಹುಬೇಗ ಕೆಡುತ್ತದೆ.
ತುಪ್ಪ ಇರುವಷ್ಟೇ ದೊಡ್ಡ ಗಾತ್ರದ ಕಂಟೈನರ್ ಬಳಸಿ. ಪ್ಲಾಸ್ಟಿಕ್ ಪಾತ್ರೆಗಿಂತ ಗಾಜಿನ್ ಬಾಕ್ಸ್ ಒಳ್ಳೆಯದು. ಪ್ಯಾಕೆಟ್ ತುಪ್ಪ ಅಂಗಡಿಯಿಂದ ತಂದಿದ್ದರೂ ಅದನ್ನೊಮ್ಮೆ ಬಿಸಿ ಮಾಡಿ ಮತ್ತೆ ಗಾಜಿನ ಪಾತ್ರೆಗೆ ವರ್ಗಾಯಿಸಿ. ಹೀಗೆ ಕಾಯಿಸುವಾಗ ನಾಲ್ಕು ಕಾಳು ಲವಂಗ ಅಥವಾ ಏಲಕ್ಕಿ ಹಾಕಿ ಬಿಸಿ ಮಾಡಿ. ಇದರಿಂದ ತುಪ್ಪದ ರುಚಿ ಹಾಳಾಗುವುದಿಲ್ಲ.