ಶೇವ್ ಮಾಡಿದ ಬಳಿಕ, ಮುಖದಲ್ಲಿ ಉರಿ ಕಾಣಿಸಿಕೊಳ್ಳುವುದು ಸಹಜ. ಅದರ ನಿವಾರಣೆಗೆ ಮತ್ತು ಮೃದುವಾದ ತ್ವಚೆ ಪಡೆಯಲು ಹೀಗೆ ಮಾಡಿ.
ಪುರುಷರ ತ್ವಚೆ ಅಷ್ಟೊಂದು ಮೃದುವಾಗಿರುವುದಿಲ್ಲ. ಹಾಗಾಗಿ ಎಚ್ಚರಿಕೆಯಿಂದ ಶೇವ್ ಮಾಡುವುದು ಬಹಳ ಮುಖ್ಯವಾಗುತ್ತದೆ. ಯಾವುದೇ ಕಾರಣಕ್ಕೆ ಉಲ್ಟಾ ಶೇವಿಂಗ್ ಮಾಡದಿರಿ. ಇದರಿಂದ ಶೇವಿಂಗ್ ಬೇಗ ಆಗುತ್ತದೆ ಎಂಬುದೇನೋ ನಿಜ ಆದರೆ ಅದರೊಂದಿಗೆ ತ್ವಚೆಯೂ ಮೃದುತ್ವವನ್ನು ಕಳೆದುಕೊಳ್ಳುತ್ತದೆ.
ಶೇವಿಂಗ್ ಮಾಡುವ ಮುನ್ನ ಕೆನ್ನೆಗೆ ನೀರು ಹಾಕಿಕೊಂಡು ತೊಳೆಯಲು ಮರೆಯದಿರಿ. ಕೆನ್ನೆ ಮೇಲೆ ನೀರಿರುವಾಗಲೇ ಶೇವಿಂಗ್ ಮಾಡಿ. ಇದರಿಂದ ತ್ವಚೆ ಮೃದುವಾಗುವುದು ಮಾತ್ರವಲ್ಲ ಮೊಡವೆ ಸಮಸ್ಯೆಯೂ ಹತ್ತಿರ ಸುಳಿಯುವುದಿಲ್ಲ.
ಶೇವಿಂಗ್ ಜೆಲ್ ಹಾಕಿಕೊಂಡು ಐದು ನಿಮಿಷ ಗ್ಯಾಪ್ ಕೊಟ್ಟು ಬಳಿಕವೇ ಶೇವ್ ಮಾಡಿ. ನಿಮ್ಮ ತ್ವಚೆಗೆ ಹೊಂದಿಕೊಳ್ಳುವ ರೇಜರ್ ಆಯ್ಕೆ ಮಾಡಿ. ಶೇವ್ ಮಾಡಿದ ಬಳಿಕ ಯಾವುದೇ ಕ್ರೀಮ್, ಜೆಲ್ ಬಳಸದಿರಿ. ಮಾಯಿಸ್ಚರೈಸರ್ ಮಾತ್ರ ಬಳಸಿ.