
ಸಕಾರಾತ್ಮಕ ಶಕ್ತಿ ಇದ್ದ ಹಾಗೇ ನಕಾರಾತ್ಮಕ ಶಕ್ತಿಗಳು ಇರುತ್ತದೆ ಎನ್ನುತ್ತಾರೆ. ನಮ್ಮ ಸುತ್ತಲೂ ಇವುಗಳು ಓಡಾಡುತ್ತಿರುತ್ತವೆಯಂತೆ. ನಾವು ಮಾಡುವ ಕೆಲವೊಂದು ತಪ್ಪಿನಿಂದ ಇವುಗಳು ನಮ್ಮ ಜೀವನದಲ್ಲಿ ಪ್ರವೇಶಿಸುತ್ತವೆ.
ಇದರಿಂದ ಸಾಕಷ್ಟು ತೊಂದರೆಯನ್ನು ಅನುಭವಿಸಬೇಕಾಗುತ್ತದೆ. ಯಾವುದೇ ಕೆಲಸ ಮಾಡಿದರೂ ಅದರಲ್ಲಿ ಯಶಸ್ಸು ಸಿಗುವುದಿಲ್ಲ. ಹಾಗೇ ಮನೆಯಲ್ಲಿ ನೆಮ್ಮದಿ ಇಲ್ಲದ ರೀತಿ ಆಗುತ್ತದೆ.
ಸೂರ್ಯಾಸ್ತದ ನಂತರ ಮಹಿಳೆಯರು ತಲೆ ಕೂದಲನ್ನು ಬಿಟ್ಟುಕೊಂಡು ಓಡಾಡಬಾರದಂತೆ. ಇದರಿಂದ ನಕರಾತ್ಮಕ ಶಕ್ತಿಗಳು ನಮ್ಮನ್ನು ಆವರಿಸುತ್ತದೆಯಂತೆ.
ಇನ್ನು ಸುಗಂಧ ದ್ರವ್ಯಗಳನ್ನು ರಾತ್ರಿಯ ವೇಳೆ ಬಳಸಬಾರದಂತೆ. ಇದು ಕೂಡ ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆಯಂತೆ. ಆದಷ್ಟು ಸಕಾರಾತ್ಮಕ ಯೋಚನೆ, ಜತೆಗೆ ದೇವರ ನಾಮಗಳನ್ನು ಜಪಿಸುವುದರ ಮೂಲಕ ಮನಸ್ಸನ್ನು ಪ್ರಶಾಂತವಾಗಿಟ್ಟುಕೊಳ್ಳುವುದನ್ನು ಅಭ್ಯಾಸ ಮಾಡಿಕೊಳ್ಳಿ. ಇದರಿಂದ ಯಾವ ಸಮಸ್ಯೆಯೂ ಆಗುವುದಿಲ್ಲ.