alex Certify ʼಡಯಾಬಿಟಿಸ್ʼ ನಿಯಂತ್ರಣದಲ್ಲಿರಲು ಹೀಗೆ ಮಾಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಡಯಾಬಿಟಿಸ್ʼ ನಿಯಂತ್ರಣದಲ್ಲಿರಲು ಹೀಗೆ ಮಾಡಿ

ನೀವು ಸೇವಿಸುವ ಕೆಲವು ಆಹಾರಗಳೇ ಡಯಾಬಿಟಿಸ್ ಲಕ್ಷಣಗಳನ್ನು ಕಡಿಮೆ ಮಾಡಬಲ್ಲವು ಎಂಬುದು ನಿಮಗೆ ತಿಳಿದಿದೆಯೇ? ಹಾಗಿದ್ದರೆ ಆ ಪದಾರ್ಥಗಳು ಯಾವುವು?

ಡಯಾಬಿಟಿಸ್ ಸಮಸ್ಯೆ ಇರುವವರಿಗೆ ಕಡಲೆ ಕಾಯಿ ಅತ್ಯುತ್ತಮ ಆಹಾರ ಎನ್ನಲಾಗಿದೆ. ನಿತ್ಯ ಒಂದು ಮುಷ್ಟಿಯಷ್ಟು ಕಡಲೆಕಾಯಿ ತಿನ್ನುವುದರಿಂದ ನಿಮ್ಮ ಹಸಿವಿನ ಸಮಸ್ಯೆಯೂ ಕಡಿಮೆಯಾಗುತ್ತದೆ, ಸಕ್ಕರೆಯ ಪ್ರಮಾಣವೂ ನಿಯಂತ್ರಣದಲ್ಲಿರುತ್ತದೆ.

ಸಕ್ಕರೆ ಅಂಶ ಕಡಿಮೆ ಇರುವ ಹಣ್ಣು ಹಾಗೂ ತರಕಾರಿಗಳನ್ನು ಬೇಯಿಸದೆ ನೇರವಾಗಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು. ಏಕೆಂದರೆ ಇವುಗಳಲ್ಲಿ ಕಾರ್ಬೋಹೈಡ್ರೇಟ್ ಪ್ರಮಾಣವೂ ಕಡಿಮೆಯಿರುತ್ತದೆ. ಈ ಸಲಾಡ್ ಅನ್ನು ಊಟಕ್ಕೆ ಮುನ್ನ ಸೇವಿಸಿ. ಯಾವುದೇ ಕೃತಕ ಸಿಹಿ ಸೇರಿಸದಿರಿ.

ಫೈಬರ್ ಗುಣ ಹೆಚ್ಚಿರುವ ತರಕಾರಿಗಳಾದ ಬೀಟ್ ರೂಟ್, ಹಸಿರು ಸೊಪ್ಪುಗಳನ್ನು ಸೇವಿಸಿ. ಜೀವಸತ್ವಗಳೂ ನಿಮ್ಮ ದೇಹ ಸೇರಲಿ. ಕ್ಯಾರೆಟ್, ಮೂಲಂಗಿ, ಸೌತೆಕಾಯಿ ಎಲ್ಲಾ ರೀತಿಯಿಂದಲೂ ನಿಮ್ಮ ಆರೋಗ್ಯವನ್ನು ರಕ್ಷಿಸುತ್ತವೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...