ವಾಸ್ತು ಶಾಸ್ತ್ರದ ಪ್ರಕಾರ ನಮ್ಮ ಸುತ್ತಮುತ್ತಲಿರುವ ವಸ್ತುಗಳು ನಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತವೆ. ಹಾಗಾಗಿ ಮನೆಯ ಪ್ರತಿಯೊಂದು ವಸ್ತುವೂ ವಾಸ್ತುಶಾಸ್ತ್ರಕ್ಕೆ ಅನುಗುಣವಾಗಿದ್ದರೆ ಅನುಕೂಲ.
ಮನೆಯ ಮುಖ್ಯ ದ್ವಾರದಲ್ಲಿ ಎರಡು ಗಣೇಶ ಮೂರ್ತಿಯನ್ನಿಟ್ಟರೆ ಎರಡೂ ಮೂರ್ತಿ ಹಿಂಭಾಗ ವಿರುದ್ಧ ದಿಕ್ಕಿನಲ್ಲಿರುವಂತೆ ನೋಡಿಕೊಳ್ಳಿ.
ಮನೆಯಲ್ಲಿ ಸತ್ಯನಾರಾಯಣನ ಪೂಜೆ ಮಾಡಿಸಿ. ಪ್ರತಿದಿನ ಓಂ ನಮೋಃ ಭಗವತೆ ವಾಸುದೇವಾಯ ಮಂತ್ರ ಪಠಿಸಿ. ಇದ್ರಿಂದ ಮನೆಯಲ್ಲಿ ಸದಾ ಲಕ್ಷ್ಮಿ ನೆಲೆಸಿರುತ್ತಾಳೆ.
ಮನೆಯ ಮಹಿಳೆ ಶುಕ್ರವಾರ ವೈಭವ ಲಕ್ಷ್ಮಿ ವೃತ ಮಾಡಿ ದಾನ ಮಾಡುವುದ್ರಿಂದ ಮನೆಯಲ್ಲಿ ಸದಾ ಸಂತೋಷ-ಸಮೃದ್ಧಿ ನೆಲೆಸಿರುತ್ತದೆ.
ರದ್ದಿ ಹಾಗೂ ಹಳೆ ಬಟ್ಟೆಯನ್ನು ಶನಿವಾರ ಮನೆಯಿಂದ ಹೊರಗೆ ಹಾಕಿದಲ್ಲಿ ಮನೆಯ ಬಡತನ ದೂರವಾಗುತ್ತದೆ.
ಗುರುವಾರ ಮನೆಯಲ್ಲಿ ಯಾವುದೇ ವಿಶೇಷ ಪೂಜೆ ಮಾಡಬೇಡಿ.
ಸೂರ್ಯ ಮುಳುಗಿದ ನಂತ್ರ ಕಸವನ್ನು ಮನೆಯಿಂದ ಹೊರಗೆ ಹಾಕಬೇಡಿ.
ಬ್ಯಾಂಕ್ ವಸ್ತು, ಚೆಕ್ ಬುಕ್ ಸೇರಿದಂತೆ ಹಣಕ್ಕೆ ಸಂಬಂಧಿಸಿದ ವಸ್ತುವನ್ನು ಉತ್ತರ ದಿಕ್ಕಿಗೆ ಮುಖ ಮಾಡಿರುವ ಕಪಾಟಿನಲ್ಲಿಡಿ.
ಪಾರದರ್ಶಕ ಸ್ಫಟಿಕ ಶಿವಲಿಂಗವನ್ನು ದೇವರ ಮನೆಯಲ್ಲಿಡಿ. ಇದ್ರಿಂದ ಸುಖ-ಸಮೃದ್ಧಿ ಪ್ರಾಪ್ತವಾಗುತ್ತದೆ.
ಶುಭ ಕಾರ್ಯಕ್ಕಾಗಿ ಮನೆಯಿಂದ ಹೊರಗೆ ಹೋಗುವ ಮುನ್ನ ಮೊಸರು ತಿಂದು ಹೋಗಿ.
ಹಣಕಾಸಿನ ಕೆಲಸವನ್ನು ಸೋಮವಾರ ಅಥವಾ ಬುಧವಾರ ಮಾಡಿ.