ಕೆಲವು ಆಹಾರಗಳನ್ನು ನಿಯಮಿತವಾಗಿ ಸೇವಿಸುವುದರ ಮೂಲಕ ಅಥವಾ ಅದನ್ನು ಮಕ್ಕಳಿಗೆ ತಿನ್ನಲು ಕೊಡುವ ಮೂಲಕ ನಾವು ಜ್ಞಾಪಕ ಶಕ್ತಿಯನ್ನು ಹೆಚ್ಚಿಸಬಹುದು. ಅವು ಯಾವುವು ಎಂದಿರಾ…?
ಬಾದಾಮಿಯನ್ನು ಹಿಂದಿನ ರಾತ್ರಿ ನೀರಿನಲ್ಲಿ ನೆನೆಸಿಟ್ಟು ಮರುದಿನ ಬೆಳಗ್ಗೆ ಸಿಪ್ಪೆ ತೆಗೆದು ಖಾಲಿ ಹೊಟ್ಟೆಗೆ ಸೇವಿಸುವುದರಿಂದ ಮಕ್ಕಳ ಜ್ಞಾಪಕ ಶಕ್ತಿ ಹೆಚ್ಚುತ್ತದೆ. ಬಾದಾಮಿಯನ್ನು ತುಸು ಬಿಸಿ ಮಾಡಿ ನುಣ್ಣಗೆ ರುಬ್ಬಿಟ್ಟುಕೊಂಡು ಬಿಸಿಯಾದ ಹಾಲಿಗೆ ಬೆರೆಸಿ ಕುಡಿಯುವುದರಿಂದಲೂ ನೆನಪಿನ ಶಕ್ತಿ ಹೆಚ್ಚುತ್ತದೆ.
ಬೆಟ್ಟದ ನೆಲ್ಲಿಕಾಯಿಗೂ ಇದೇ ಗುಣವಿದೆ. ಇದನ್ನು ಒಣಗಿಸಿ ಪುಡಿ ಮಾಡಿಟ್ಟುಕೊಂಡು ಬೇಕಾದಾಗ ತಿನ್ನಬಹುದು ಇಲ್ಲವೇ ತಾಜಾ ನೆಲ್ಲಿಕಾಯಿಯನ್ನು ಸೇವಿಸಬಹುದು. ಇದರಿಂದಲೂ ಜ್ಞಾಪಕ ಶಕ್ತಿ ಹೆಚ್ಚುತ್ತದೆ.
ಕಾಡ ಜೀರಿಗೆ ಅಥವಾ ಕಪ್ಪು ಜೀರಿಗೆಗೆ ಜೇನುತುಪ್ಪ ಸೇರಿಸಿ ತಿನ್ನುವುದರಿಂದ ಮೆದುಳು ಚುರುಕುಗೊಳ್ಳುತ್ತದೆ. ಮರೆವಿನ ಕಾಯಿಲೆ ದೂರವಾಗುತ್ತದೆ. ಆರೋಗ್ಯಕರ ಜೀವನವನ್ನು ನಿಮ್ಮದಾಗಿಸಿಕೊಳ್ಳಲು ಮರೆಯದೆ ಇವುಗಳನ್ನು ಸೇವಿಸಿ.