ತಲೆಕೂದಲು ಉದ್ದವಾಗಿ ಆಕರ್ಷಕವಾಗಿ ಬೆಳೆಯಲೆಂದು ಮೊಟ್ಟೆ ಬಳಸಿದ್ದೀರಾ, ಈಗ ನಿಮ್ಮ ತಲೆಯ ವಾಸನೆಯನ್ನು ದೂರ ಮಾಡುವುದು ಹೇಗೆ ಎಂಬ ಚಿಂತೆಯೇ, ಇಲ್ಲಿ ಕೇಳಿ.
ಮೊಟ್ಟೆಯು ಪ್ರೊಟೀನ್ ನಿಂದ ಸಮೃದ್ಧವಾಗಿದ್ದು ಕೂದಲಿನ ಫಾಲಿಕಲ್ ಗಳನ್ನು ಹೆಚ್ಚಿಸಿ ಉದುರುವುದನ್ನು ತಡೆಯುತ್ತದೆ. ಈ ವಾಸನೆಯಿಂದ ಮುಕ್ತಿ ಪಡೆಯಲು ಮೊಟ್ಟೆ ಹಾಕಿ ಸ್ನಾನ ಮಾಡಿದ ಬಳಿಕ ತಲೆಯನ್ನು ಸ್ವಚ್ಛವಾಗಿ ತೊಳೆಯಿರಿ. ತೇವಾಂಶ ಒಣಗಿಸಿ. ತಲೆಯಲ್ಲಿ ನೀರಿನ ಪಸೆ ಉಳಿದರೆ ಅದು ಕೆಟ್ಟ ವಾಸನೆ ಬೀರುತ್ತದೆ.
ನೀವು ಬಳಸುವ ಶ್ಯಾಂಪು ಕೂಡ ವಾಸನೆಗೆ ಕಾರಣವಾಗುತ್ತದೆ. ಹಾಗಾಗಿ ಸೂಕ್ತ ಶಾಂಪುವನ್ನೇ ಬಳಸಿ. ನಿಮ್ಮ ಕೂದಲು ಅತಿಯಾಗಿ ಬೆವರಿದಾಗ ಅಂದರೆ ತಲೆಯಲ್ಲಿ ಅತಿಯಾಗಿ ಬೆವರು ಕಾಣಿಸಿಕೊಂಡಾಗ ಕೂದಲಲ್ಲಿ ವಾಸನೆ ಕಂಡುಬರುತ್ತದೆ. ಅದಕ್ಕೆ ಕೆಲವು ವೈದ್ಯಕೀಯ ಕಾರಣವೂ ಇವೆ. ನಿಂಬೆರಸ, ಟೊಮ್ಯಾಟೊ ಜ್ಯೂಸ್ ಬಳಸುವುದರಿಂದಲೂ ವಾಸನೆಯನ್ನು ದೂರ ಮಾಡಬಹುದು.