ಸನಾತನ ಧರ್ಮದಲ್ಲಿ ಸಾವಿನ ನಂತ್ರವೂ ಜೀವನ ಅಂತ್ಯವಾಗಲ್ಲ ಎಂಬ ನಂಬಿಕೆಯಿದೆ. ಆತ್ಮ ಒಂದು ಜನ್ಮ ಪೂರ್ಣಗೊಳಿಸಿ ಇನ್ನೊಂದು ಜನ್ಮ ಶುರು ಮಾಡಲಿದೆ ಎಂದು ನಂಬಲಾಗಿದೆ. ಸಾವಿನ ನಂತ್ರ ಆತ್ಮಕ್ಕೆ ಶ್ರಾದ್ಧ ಮಾಡುವ ಪದ್ಧತಿ ಹಿಂದೂ ಧರ್ಮದಲ್ಲಿದೆ.
ಭಾದ್ರಪದ ಮಾಸದ ಪೂರ್ಣಿಮೆ ನಂತ್ರ ಆಶ್ವೀಜ ಮಾಸದ ಅಮವಾಸ್ಯೆಯವರೆಗೆ 16 ದಿನಗಳ ಕಾಲ ಪಿತೃಪಕ್ಷವಿರಲಿದೆ. ಈ 16 ದಿನ ಮೃತ ವ್ಯಕ್ತಿಗಳ ಆತ್ಮಕ್ಕೆ ಶಾಂತಿ ಕೋರಲು ಶ್ರಾದ್ಧ ಮಾಡಲಾಗುತ್ತದೆ. ಹಿರಿಯರು ಸಾವನ್ನಪ್ಪಿದ ತಿಥಿಯಂದು ಪ್ರತಿ ವರ್ಷ ಶ್ರಾದ್ಧ ಮಾಡುವವರಿದ್ದಾರೆ. ಇದು ಸಾಧ್ಯವಾಗದವರು ಪಿತೃ ಪಕ್ಷದಂದು ಶ್ರಾದ್ಧ ಮಾಡ್ತಾರೆ. ಇದನ್ನು ಮಾಡದೆ ಹೋದಲ್ಲಿ ಪಿತೃ ದೋಷ ಕಾಡುತ್ತೆ ಎಂಬ ನಂಬಿಕೆ ಇದೆ.
ಪಿತೃ ಪಕ್ಷದ ಶ್ರಾದ್ಧ ಕರ್ಮದ ವೇಳೆ ಎಲೆಯಡಿಕೆ ತಿನ್ನುವುದು, ಎಣ್ಣೆ ಹಚ್ಚಿಕೊಳ್ಳುವುದು, ಕೂದಲು ಕತ್ತರಿಸಿಕೊಳ್ಳುವುದು, ಬೇರೆಯವರ ಮನೆ ಊಟ ಮಾಡುವುದು, ಪ್ರಯಾಣ ಬೆಳೆಸುವುದು, ಕೋಪ ಹಾಗೂ ಲೈಂಗಿಕ ಸಂಭೋಗವನ್ನು ನಿಷೇಧಿಸಲಾಗಿದೆ.
ನೀರು, ಅಕ್ಷತೆ, ಚಂದನ, ಹೂ, ಎಳ್ಳನ್ನು ಹಿಡಿದು ಬ್ರಾಹ್ಮಣರಿಂದ ಸಂಕಲ್ಪ ಮಾಡಿಸಬೇಕು.
ಈ ದಿನ ಕಡಲೆ, ಬೇಳೆ, ಸೌತೆಕಾಯಿ, ಕಪ್ಪು ಜೀರಿಗೆ, ಕಲ್ಲುಪ್ಪು, ಅನ್ನವನ್ನು ಸೇವಿಸಬಾರದು.
ಪಿತೃರಿಗೆ ಇಷ್ಟವಾದ ಆಹಾರದ ಜೊತೆಗೆ ಹಾಲು, ಮೊಸರು, ತುಪ್ಪ, ಜೇನುತುಪ್ಪ ಬೆರಸಿದ ಅನ್ನದ ಖೀರ್ ತಯಾರಿಸಬೇಕು.
ಶ್ರಾದ್ಧದ ವೇಳೆ ಕಬ್ಬಿಣ ಬಳಕೆಯನ್ನು ಅಶುಭವೆಂದು ಪರಿಗಣಿಸಲಾಗಿದೆ.
ಶ್ರಾದ್ಧಕ್ಕೆ ಕಪ್ಪು ಎಳ್ಳು ಅವಶ್ಯವಾಗಿ ಬೇಕು.