ಅನೇಕರು ಕಣ್ಣಿನ ಊತ (ಕಂಜಂಕ್ಟಿವಿಟಿಸ್) ಸಮಸ್ಯೆಯಿಂದ ಬಳಲುತ್ತಾರೆ, ಕಂಜಂಕ್ಟಿವಿಟಿಸ್ ಐದು ಕಾರಣಗಳಿಂದ ಉಂಟಾಗುತ್ತದೆ. ಬ್ಯಾಕ್ಟೀರಿಯಾ ಸೋಂಕು, ವೀರ್ಯ ಸೋಂಕು, ಅಲರ್ಜಿ, ಕಣ್ಣಿಗೆ ಯಾವುದೇ ರಾಸಾಯನಿಕ ಹೋಗಿದ್ದರೆ ಅಥವಾ ಕಸ ಹೋಗಿದ್ದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ.
ಇದೊಂದು ಸಾಂಕ್ರಾಮಿಕ ರೋಗವಾಗಿದೆ. ಒಬ್ಬ ವ್ಯಕ್ತಿಯಿಂದ ಇನ್ನೊಬ್ಬ ವ್ಯಕ್ತಿಗೆ ಈ ರೋಗ ಹರಡುತ್ತದೆ. ಹಾಗಾಗಿ ಕಣ್ಣಿನ ಊತ ಕಾಣಿಸಿಕೊಂಡವರ ಕಣ್ಣಲ್ಲಿ ಕಣ್ಣಿಟ್ಟು ನೋಡಬೇಡಿ. ಅವರು ಬಳಸಿದ ಬಟ್ಟೆ, ಟವೆಲ್, ವಸ್ತುಗಳನ್ನು ಬಳಸಬೇಡಿ.
ಇದು ಅಪಾಯಕಾರಿ ರೋಗವಲ್ಲ. ಆದ್ರೆ ಕಿರಿಕಿರಿ ತಪ್ಪಿದ್ದಲ್ಲ. ಕಣ್ಣಿನ ಊತ ಕಾಣಿಸಿಕೊಂಡ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಉತ್ತಮ. ಬೆಳಿಗ್ಗೆ ಕಣ್ಣಿನ ರೆಪ್ಪೆಗಳು ಮುಚ್ಚಿಕೊಂಡಿದ್ದರೆ ಉಗುರು ಬೆಚ್ಚಗಿನ ನೀರಿನಲ್ಲಿ ಕಣ್ಣನ್ನು ಸ್ವಚ್ಛಗೊಳಿಸಿಕೊಳ್ಳಿ. ಸನ್ ಗ್ಲಾಸ್ ಹಾಕಿಕೊಳ್ಳುವುದು ಉತ್ತಮ. ನಿಮ್ಮ ರೋಗ ಬೇರೆಯವರಿಗೆ ಹರಡುವುದನ್ನು ತಪ್ಪಿಸಬಹುದು.
ಒಂದು ಸ್ವಚ್ಛ ಬಟ್ಟೆಯನ್ನು ತಣ್ಣನೆಯ ನೀರಿನಲ್ಲಿ ಅದ್ದಿ ಅದನ್ನು ಆಗಾಗ ಕಣ್ಣಿನ ಮೇಲಿಡಿ. ಆಲೂಗಡ್ಡೆ ತುಣುಕುಗಳನ್ನು ಕಣ್ಣಿನ ಮೇಲಿಟ್ಟುಕೊಳ್ಳುವುದರಿಂದಲೂ ನೀವು ಕಣ್ಣು ಊತದಿಂದ ಸ್ವಲ್ಪ ನೆಮ್ಮದಿ ಪಡೆಯಬಹುದು. ಜೀವಸತ್ವಗಳು ಕಡಿಮೆಯಾದಲ್ಲಿ ಪದೇ ಪದೇ ಸಾಂಕ್ರಾಮಿಕ ರೋಗಗಳು ಕಾಣಿಸಿಕೊಳ್ಳುತ್ತವೆ. ಹಾಗಾಗಿ ಜೀವಸತ್ವ ಸಿ ಹಾಗೂ ಬಿ ಸೇವನೆಯನ್ನು ಹೆಚ್ಚು ಮಾಡುವುದು ಒಳ್ಳೆಯದು.