alex Certify ಬಿರುಕು ಬಿಟ್ಟ ಹಿಮ್ಮಡಿ ನಿವಾರಣೆಗೆ ಹೀಗೆ ಮಾಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿರುಕು ಬಿಟ್ಟ ಹಿಮ್ಮಡಿ ನಿವಾರಣೆಗೆ ಹೀಗೆ ಮಾಡಿ

ಚಳಿಗಾಲದಲ್ಲಿ ಹಿಮ್ಮಡಿ ಬಿರುಕು ಸಮಸ್ಯೆ ಎಲ್ಲರನ್ನೂ  ಕಾಡುತ್ತದೆ. ಮಲಗುವ ಮುನ್ನ ಕಾಲನ್ನು ಸ್ವಚ್ಛವಾಗಿ ತೊಳೆದು ವ್ಯಾಸಲಿನ್ ನಂಥ ಜೆಲ್ ಅಥವಾ ಬೆಣ್ಣೆ ಸವರಿ ಮಲಗುವುದರಿಂದ ಈ ಬಿರುಕು ಹಾಗೂ ನೋವು ಬಹುಪಾಲು ಕಡಿಮೆಯಾಗುತ್ತದೆ.

ಕೆಲವರಿಗೆ ಈ ನೋವು ವಿಪರೀತವಾಗಿ ಹೆಜ್ಜೆಯೂರಿ ನಡೆಯುವುದೂ ಕಷ್ಟವಾಗುತ್ತದೆ. ಅಂಥವರು ಧೂಳಿನ ವಾತಾವರಣದಿಂದ ಸಾಧ್ಯವಾದಷ್ಟು ದೂರವಿರುವುದು ಒಳ್ಳೆಯದು. ಚಳಿಗಾಲದಲ್ಲಿ ಕಡ್ಡಾಯವಾಗಿ ಕಾಲುಚೀಲಗಳನ್ನು ತೊಟ್ಟುಕೊಳ್ಳುವುದರಿಂದ ಈ ನೋವನ್ನು ಕಡಿಮೆ ಮಾಡಬಹುದು.

ವಿಪರೀತ ನೋವು ಇರುವವರು ಮಲಗುವ ಮುನ್ನ ಬೆಚ್ಚಗಿನ ನೀರಿನಲ್ಲಿ ಇಪ್ಪತ್ತು ನಿಮಿಷ ಕಾಲುಗಳನ್ನು ಮುಳುಗಿಸಿಡಿ. ಬಳಿಕ ಹಿಮ್ಮಡಿಯಲ್ಲಿರುವ ಅನಗತ್ಯ ಅಥವಾ ಸತ್ತ ಜೀವಕೋಶಗಳನ್ನು ಒರಟಾದ ಕಲ್ಲಿನಿಂದ ಉಜ್ಜಿ ತೆಗೆಯಿರಿ. ಮತ್ತೆ ತಣ್ಣೀರಿನಿಂದ ಕಾಲು ತೊಳೆದುಕೊಂಡು ಮಾಯಿಸ್ಚರೈಸರ್ ಅಥವಾ ಜೆಲ್ ಹಚ್ಚಿಕೊಳ್ಳಿ.

ತೆಂಗಿನೆಣ್ಣೆ ಇಂಥ ಹಲವು ಸಮಸ್ಯೆಗಳಿಗೆ ಔಷಧ. ಇದರಲ್ಲಿ ಬ್ಯಾಕ್ಟೀರಿಯಾಗಳನ್ನು ನಾಶ ಮಾಡುವ ಗುಣವಿದೆ. ದಿನವಿಡೀ ನಾಲ್ಕಾರು ಬಾರಿಯಾದರೂ ಹಿಮ್ಮಡಿಗೆ ತೆಂಗಿನೆಣ್ಣೆ ಹಚ್ಚಿಕೊಳ್ಳಿ. ಆದರೆ ನಡೆಯುವಾಗ ಎಚ್ಚರವಿರಲಿ. ಇದೇ ಕಾರಣಕ್ಕೆ ಜಾರಿ ಬೀಳದಿರಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...